ಕೇಂದ್ರ – ರಾಜ್ಯ ಬಿಜೆಪಿ ಎಷ್ಟೇ ಟಾರ್ಗೆಟ್ ಮಾಡಿದರೂ ನಾವು ಹೆದರಲ್ಲ: ಪ್ರದೀಪ್ ಈಶ್ವರ್

0
Spread the love

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಎಷ್ಟೇ ಟಾರ್ಗೆಟ್ ಮಾಡಿದರೂ ನಾವು ಹೆದರಲ್ಲ  ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ನಗರದಲ್ಲಿ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಅವರು,

Advertisement

ಅದಾನಿ, ಅಂಬಾನಿ ಮೇಲೆ ಇಡಿ ದಾಳಿ ಆಗಲ್ಲ. ಬಿಜೆಪಿ, ವಿಜಯೇಂದ್ರ ಮೇಲೆ ರೇಡ್ ಆಗಲ್ಲ. ಐಟಿ, ಇಡಿಯವರಿಗೆ ಕಾಂಗ್ರೆಸ್ನವರ ಮೇಲೆ ಬಹಳ ಪ್ರೀತಿ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಎಷ್ಟೇ ಟಾರ್ಗೆಟ್ ಮಾಡಿದರೂ ನಾವು ಹೆದರಲ್ಲ ಎಂದರು.

ಇನ್ನೂ ಸುಬ್ಬಾರೆಡ್ಡಿಯವರು ತುಂಬಾ ಕಷ್ಟಪಟ್ಟು ಬಡತನದಲ್ಲಿ ಮೇಲೆಬಂದು ಬೆಂಗಳೂರಿನಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡು ಮೂರು ಬಾರಿ ಶಾಸಕರಾಗಿದ್ದಾರೆ. ಸುಬ್ಬಾರೆಡ್ಡಿ ಅಂದರೆ ಪಕ್ಷನಿಷ್ಠೆ, ಪಕ್ಷನಿಷ್ಠೆ ಅಂದರೆ ಅದು ಸುಬ್ಬಾರೆಡ್ಡಿ. ಅಂತಹ ವ್ಯಕ್ತಿಯ ಮನೆಮೇಲೆ ಇಂದು ಇಡಿ ರೇಡ್ ಮಾಡಿದೆ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here