ಮೈಸೂರು: ಇನ್ನೂ ಎರಡೂವರೆ ವರ್ಷ ಉತ್ತಮ ಆಡಳಿತ ಕೊಡುವುದು ನಮ್ಮ ಉದ್ದೇಶ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಅವರು ಹಿಂದೆಯೂ ಹೇಳಿದ್ದರು, ಈಗಲೂ ಅದನ್ನೇ ಹೇಳಿದ್ದಾರೆ.
Advertisement
ಮತ್ತೊಬ್ಬರಿಗೆ ಅವಕಾಶ ಇದೆಯೋ ಇಲ್ಲವೋ ಎಂಬುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು. ಇನ್ನೂ ದೇವರಲ್ಲಿ ನಾಡಿಗೆ ಹಾಗೂ ನನಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ.
ಇನ್ನೂ ಎರಡೂವರೆ ವರ್ಷ ಉತ್ತಮ ಆಡಳಿತ ಕೊಡುವುದು ನಮ್ಮ ಮುಂದೆ ಇದೆ. ದೇವರ ಸನ್ನಿಧಿಯಲ್ಲಿ ನಿಂತು ಹೆಚ್ಚು ರಾಜಕೀಯ ಮಾತನಾಡುವುದಿಲ್ಲ. ನಮ್ಮಲ್ಲೇ ಮೊದಲು ಎಂಬಂತೆ ಮಾಧ್ಯಮದವರಿಗೆ ಎಲ್ಲಾ ಬೆಳವಣಿಗೆ ಗೊತ್ತಾಗುತ್ತದೆ ಎಂದರು.