ಚೆನ್ನೈ: ಬರೀ ಸುಳ್ಳು ಸುದ್ದಿ.. ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಿಡಿಕಾರಿದ್ದಾರೆ. ಚೆನ್ನೈನ ಐಐಟಿ ಮದ್ರಾಸ್ನ 62ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ದೋವಲ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಿದರು. ರಕ್ಷಣಾ ಸಾಮರ್ಥ್ಯಗಳಲ್ಲಿ ಭಾರತದ ಸ್ವಾವಲಂಬನೆಯನ್ನು ಒತ್ತಿ ಹೇಳಿದ್ದಾರೆ.
ಇನ್ನೂ ವಿದೇಶಿ ಮಾಧ್ಯಮಗಳು ಭಾರತೀಯ ಯಾವುದೇ ರಚನೆಗೆ ಹಾನಿಯಾಗಿರುವುದನ್ನು ತೋರಿಸುವಲ್ಲಿ ವಿಫಲವಾಗಿವೆ. ಬರೀ ಸುಳ್ಳು ಸುದ್ದಿಗಳನ್ನೇ ಹರಡಿವೆ ಎಂದು ವಾಗ್ದಾಳಿ ನಡೆಸಿದರಲ್ಲೇ ಭಾರತಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮೇ 7ರ ಮಧ್ಯರಾತ್ರಿ ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ ದೋವಲ್, ನಮ್ಮ ಸಶಸ್ತ್ರ ಪಡೆಗಳು ನಿಖರ ಗುರಿಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ದಾಳಿ ಮಾಡಲಿಲ್ಲ. ಶತ್ರು ಪ್ರದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲಷ್ಟೇ ದಾಳಿ ಮಾಡಿದವು. ಭಾರತದ ಈ ಪ್ರತೀಕಾರದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾದರು. 23 ನಿಮಿಷಗಳ ಕಾಲ ಸಂಪೂರ್ಣ ಕಾರ್ಯಾಚರಣೆ ನಡೆದಿತ್ತು ಎಂದು ತಿಳಿಸಿದರು.