ರಾಯಚೂರು: ರಾಯಚೂರು- ಯಾದಗಿರಿಗೆ ಸಂಪರ್ಕ ಕಲ್ಪಿಸುವ ಗುರ್ಜಾಪುರ ಸೇತುವೆ ಬಳಿ ನವದಂಪತಿ ಮಧ್ಯೆ ಸೆಲ್ಫಿ ವಿಚಾರಕ್ಕೆ ಕಿರಿಕ್ ಆಗಿ ಕೊನೆಗೆ ನವವಿವಾಹಿತೆಯೊಬ್ಬಳು ಗಂಡನನ್ನೇ ನದಿಗೆ ತಳ್ಳಿದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಶಿವಪುರ ಗ್ರಾಮದ ನವಜೋಡಿಯೊಂದು ಗುರ್ಜಾಪುರ ಸೇತುವೆ ಮೇಲೆ ನಿಂತುಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದರು.
ಈ ವೇಳೆ ಪತಿ-ಪತ್ನಿಗೆ ವಾಗ್ವಾದ ನಡೆದಿದ್ದು, ಕೊನೆಗೆ ಕೋಪಗೊಂಡ ಪತ್ನಿ ಕೂಡಲೇ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ್ದಾಳೆ. ತುಂಬಿ ಹರಿಯುವ ಕೃಷ್ಣ ನದಿಗೆ ಬಿದ್ದ ಪತಿ ಕೂಗಾಡಲು ಆರಂಭಿಸಿದ್ದಾನೆ. ಅಲ್ಲಿದ್ದ ಕಲ್ಲುಬಂಡೆಗಳ ಮೇಲೆ ನಿಂತು ರಕ್ಷಿಸುವಂತೆ ಚೀರಾಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಮೀನುಗಾರರು ಹಗ್ಗ ಹಾಕಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದ್ದಾರೆ.
ನದಿಯಿಂದ ಮೇಲೆ ಬರುತ್ತಿದ್ದಂತೆ ಪತ್ನಿಯ ಮೇಲೆ ಹರಿಹಾಯ್ದಿದ್ದಾನೆ. ಬಳಿಕ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.ಆದರೆ ಪತ್ನಿ ಆತನೇ ಆಯತಪ್ಪಿ ಬಿದ್ದಿದ್ದಾನೆ ಎಂದಿದ್ದಾಳೆ. ಆದರೆ ಪ್ರತ್ಯಕ್ಷದರ್ಶಿಗಳು ಆಕೆಯೇ ತಳ್ಳಿದ್ದಾಳೆ ಎಂದಿದ್ದಾರೆ. ಬಳಿಕ ಪತಿಯನ್ನು ಪತ್ನಿ ಸಮಾಧಾನಪಡಿಸಿ ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ