ರಾಮನಗರ: ಕನಕಪುರ ನಗರದಲ್ಲಿ ಬೆಳಗಿನ ವಾಕಿಂಗ್ ವೇಳೆ ಹೃದಯಾಘಾತ ಸಂಭವಿಸಿ ನರ್ಸಿಂಗ್ ಹೋಂ ಮಾಲೀಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಮಂಜುನಾಥ್ (50) ಎಂದು ಗುರುತಿಸಲಾಗಿದೆ. ಅವರು ಕನಕಪುರದ ಪ್ರಸಿದ್ಧ ಗಣೇಶ್ ನರ್ಸಿಂಗ್ ಹೋಮ್ ಹಾಗೂ ಗಣೇಶ್ ಮೆಡಿಕಲ್ ಮಾಲೀಕರಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಪಡೆದವರಾಗಿದ್ದರು.
Advertisement
ಈ ದಿನ ಬೆಳಗ್ಗೆ ವಾಕಿಂಗ್ ಗೆ ತೆರಳಿದ್ದ ವೇಳೆ ಅವರು ತೀವ್ರ ಎದೆನೋವಿನಿಂದ ಕುಸಿದು ಬಿದ್ದರು. ತಕ್ಷಣವೇ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ವೈದ್ಯರು ಮಂಜುನಾಥ್ ಅವರನ್ನು ಮೃತ ಎಂದು ಘೋಷಿಸಿದರು.
ಮಂಜುನಾಥ್ ಅವರು ಕನಕಪುರ ಗ್ರಾಹಕರ ವೇದಿಕೆ ಹಾಗೂ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಅವರ ಅಕಾಲಿಕ ನಿಧನದಿಂದ ವೈದ್ಯಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಆಘಾತ ಹಾಗೂ ದುಃಖದ ಛಾಯೆ ನಿರ್ಮಾಣವಾಗಿದೆ.