ಬೆಂಗಳೂರು: ದೇಶದಲ್ಲಿ ಪ್ರಾಮಾಣಿಕ ಸಿಎಂ ಯಾರಾದ್ರು ಇದ್ದರೆ ಅವರು ಸಿದ್ದರಾಮಯ್ಯ ಮಾತ್ರ ಎಂದು ಸಿಎಂ ಪರ ಸಚಿವ ಬೈರತಿ ಸುರೇಶ್ ಬ್ಯಾಟಿಂಗ್ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಾಮಾಣಿಕ ಸಿಎಂ ಯಾರಾದ್ರು ಇದ್ದರೆ ಅವರು ಸಿದ್ದರಾಮಯ್ಯ.
Advertisement
ಸಿಎಂ ಮೇಲೆ ಏನೇನೋ ಆರೋಪ ಮಾಡಿ ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸ ಬೇರೆ ರಾಜಕಾರಣಿಗಳು ಮಾಡ್ತಾರೆ. ಆದ್ರೆ ಈ ಆರೋಪಗಳು ಸಿದ್ದರಾಮಯ್ಯ ಅವರ ಹತ್ತಿರವೂ ಬರುವುದಿಲ್ಲ. ಸಿಎಂ ಮೇಲಿನ ಹೊಟ್ಟೆ ಉರಿಗೆ ಆರೋಪ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
16 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ದೇವರಾಜ್ ಅರಸ್ ದಾಖಲೆ ಮುರಿದು ಸಿಎಂ ಆಗಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಸಿಎಂ ಮೇಲಿರಲಿ. ನಿಮ್ಮ ಆಶೀರ್ವಾದ ಇರೋವರೆಗೂ ಸಿದ್ದರಾಮಯ್ಯ ಅವರಿಗೆ ಯಾರು ಏನು ಮಾಡೋಕೆ ಆಗೊಲ್ಲ. ನಾನು ಅವರ ಕ್ಯಾಬಿನೆಟ್ನಲ್ಲಿ ಮಂತ್ರಿ ಆಗಿರೋದು ನನ್ನ ಪುಣ್ಯ ಎಂದು ಹೇಳಿದ್ದಾರೆ.