ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಾಮ್‌ನಲ್ಲಿ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಖದೀಮನನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಧರ್ಮಧೇಟು ಕೊಟ್ಟಿರುವ ಘಟನೆನಡೆದಿದೆ. ನಾಗಮಂಗಲ ಮೂಲದ 45 ವರ್ಷದ ಈ ವ್ಯಕ್ತಿ,
Advertisement
ಭಿಕ್ಷೆ ಬೇಡುವ ನೆಪದಲ್ಲಿ ಕಳೆದ ಕೆಲವು ದಿನಗಳಿಂದ ಗಂಜಾಮ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದನು. ನೆನ್ನೆ ರಾತ್ರಿ ಮನೆಯೊಂದರಲ್ಲಿ ನುಗ್ಗಿ ಮೊಬೈಲ್ ಕದ್ದಿದ್ದ ಈತ, ಇಂದು ಮತ್ತೊಂದು ಮನೆಯೊಳಗೆ ನುಗ್ಗಲು ಯತ್ನಿಸಿದ ವೇಳೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಕಳ್ಳನಿಗೆ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿದ್ದಾರೆ.
ಎರಡು ದಿನಗಳ ಹಿಂದೇಷ್ಟೆ ಗ್ರಾಮದಲ್ಲಿ ಮನೆಯೊಂದ ರಲ್ಲಿ ಈ ಕಳ್ಳತನ ನಡೆದಿತ್ತು ಆರೋಪಿ ಕಳ್ಳನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.