ವಿಜಯಪುರ:ವಿಜಯಪುರ ನಗರದಲ್ಲಿ ಮತ್ತೇ ನೆತ್ತರು ಹರಿದಿದ್ದು, ಯುವಕನ ಮೇಲೆ ನಾಲ್ವರು ಯುವಕರು, ಮಾರಾಕಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದುಷ್ಕರ್ಮಿಗಳಿಂದ ಸುಶೀಲ್ ಕಾಳೆ ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡಿರೋ ಸುಶೀಲ ಕಾಳೆ ಎಂಬಾತನಿಗೆ ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಜಯಪುರ ನಗರದ ಅಮರ ವರ್ಷಿಣಿ ಸಹಕಾರಿ ಬ್ಯಾಂಕ್ ನಲ್ಲಿ ಈ ಘಟನೆ ಜರುಗಿದೆ. ನಗರದ ಎಸ್ ಎಸ್ ರಸ್ತೆಯ ಎಸ್ ಎಸ್ ಕಾಂಪ್ಲೆಕ್ಸ್ ನಲ್ಲಿರೋ ಸಹಕಾರಿ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿರುವ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಗಾಯಾಳು ಸುಶೀಲ್ ಕಾಳೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಗಾಂಧಿ ಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ದಾಳಿ ಮಾಡಿ ಪರಾರಿಯಾದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಯಾರು ದಾಳಿ ಮಾಡಿದ್ದು? ಯಾಕೆ ದಾಳಿ ಮಾಡಿದ್ದು? ಎಂಬ ತನಿಖೆಗೆ ಪೊಲೀಸರು ಇಳಿದಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.