ಗದಗ ಎಸ್ಪಿ ಬಿಎಸ್ ನೇಮಗೌಡ ಬೆಂಗಳೂರಿಗೆ ವರ್ಗಾವಣೆ; ರೋಹನ್ ಜಗದೀಶ್ ಗದಗ ನೂತನ ಎಸ್ಪಿ !
ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಎರಡೂವರೆ ವರ್ಷಗಳಿಂದ ಇಲಾಖೆಯಲ್ಲಿ ಹಾರ್ಡ್ ವರ್ಕರ್ ಎಂದೆ ಹೆಸರಾಗಿದ್ದ, ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದ ಬಾಬಾಸಾಹೇಬ ನೇಮಗೌಡ (ಬಿ.ಎಸ್ ನೇಮಗೌಡ) ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.





ನಿನ್ನೆ ರಾತ್ರಿ 35ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಅದರಲ್ಲಿ ಗದಗ ಎಸ್ಪಿ ಬಿ.ಎಸ್ ನೇಮಗೌಡ ಅವರನ್ನು ಬೆಂಗಳೂರಿನ ಮಹಾನಗರದ ಉತ್ತರ ವಿಭಾಗದ ಡೆಪ್ಯೂಟಿ ಕಮಿಷನರ್ ಹುದ್ದೆಗೆ ನೇಮಕ ಮಾಡಿ ಆದೇಶ ಮಾಡಲಾಗಿದೆ. ಹಾಗೆಯೇ ಗದಗ ಎಸ್ಪಿಯನ್ನಾಗಿ ಬೆಳಗಾವಿಯಲ್ಲಿ ಲಾ ಆ್ಯಂಡ್ ಆರ್ಡರ್ನ ಡೆಪ್ಯೂಟಿ ಕಮಿಷನರ್ ಆಗಿದ್ದ (2019) ಬ್ಯಾಚ್ನ ರೋಹನ್ ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಇಲಾಖೆಯಲ್ಲಿ ಹಾರ್ಡ್ ವರ್ಕ್ರ್ ಎಂದೇ ಹೆಸರಾಗಿದ್ದ ಬಾಬಾಸಾಹೇಬ್ ನೇಮಗೌಡ ಅವರು ಎಸ್ಪಿ ಕಚೇರಿ ಆವರಣ, ರಸ್ತೆ, ವಿವಿಧ ಸರ್ಕಲ್ಗಳಲ್ಲಿ ವಾಹನ ಸವಾರರಿಗೆ ನೆರಳು ಪರದೆ ಮಾಡಿದ್ದನು ಸಾರ್ವಜನಿಕರು ಮರೆಯುಂತಿಲ್ಲ. ಸಾರ್ವಜನಿಕರೊಂದಿಗೆ ಸೌಮ್ಯದಿಂದಲೇ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಮನೆ ಮಾತಾಗಿದ್ದರು.



