ಇಂದು ದಶವರದಲ್ಲಿ ಕಲಾದೇವಿ ಸರೋಜಾ ದೇವಿ ಅಂತ್ಯಕ್ರಿಯೆ: ಅಂತಿಮ ನಮನ ಸಲ್ಲಿಸಲಿರುವ ಸಿಎಂ

0
Spread the love

ಚತುರ್ಭಾಷಾ ನಟಿ ಬಿ ಸರೋಜಾ ದೇವಿ ಜುಲೈ 14ರಂದು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ನಟಿಯ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದು ಇಂದು 11.30ಕ್ಕೆ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Advertisement

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಟರಾದ ಶಿವರಾಜಕುಮಾರ್, ರಾಘವೇಂದ್ರ ರಾಜ್‌ ಕುಮಾರ್, ಜಗ್ಗೇಶ್, ಉಪೇಂದ್ರ, ನಟಿಯರಾದ ತಾರಾ, ಶೃತಿ, ಮಾಲಾಶ್ರೀ, ತಮಿಳು ನಟ ವಿಶಾಲ್‌, ಕಾರ್ತಿ ಸೇರಿದಂತೆ ಹಲವು ಸರೋಜದೇವಿ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ದಶವರದಲ್ಲಿ ಇರೋ ಪ್ರಕೃತಿ ಮಡಿಲಲ್ಲಿ ಬೆಳಗ್ಗೆ 11.30ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಸರೋಜದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ. ರಾತ್ರಿಪೂರ್ತಿ ಸರೋಜಾ ಅಂತಿಮ ದರ್ಶನ ಮಾಡಲಾಗಿದ್ದು, ಹಲವರು ಬಂದು ಅಭಿನಯ ಶಾರದೆಯ ದರ್ಶನ ಪಡೆದುಕೊಂಡಿದ್ದಾರೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಅಂತಿಮ ದರ್ಶನವನ್ನ ಪಡೆಯಲಿದ್ದಾರೆ. ಬಳಿಕ ರಾಮನಗರದ ದಶವರದಲ್ಲಿ ಕುಟುಂಬಸ್ಥರು ಅಂತಿವ ವಿಧಿವಿಧಾನ ನಡೆಯಲಿದೆ.


Spread the love

LEAVE A REPLY

Please enter your comment!
Please enter your name here