ದಾವಣಗೆರೆ: ಜಗಳೂರು ತಾಲೂಕಿನ ಗೋಡೆ ಗ್ರಾಮದಲ್ಲಿ ಕಾಡು ಹಂದಿಗಳು ರೈತರ ಮೆಕ್ಕೆಜೋಳದ ಬೆಳೆ ನಾಶ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರಿಂದ ಅರಣ್ಯ ಇಲಾಖೆಯ ನೌಕರನ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನ ಮಾಡಿರುವ ಘಟನೆ ನಡೆದಿದೆ.
ಗೋಡೆ ಗ್ರಾಮದ ಅಂಚಿನಲ್ಲಿ ಇರುವ ಜಮೀನಿನಲ್ಲಿ ಕಾಡು ಹಂದಿಗಳು ನುಗ್ಗಿ ಬೆಳೆ ನಾಶಪಡಿಸಿದ್ದು, ಈ ವಿಚಾರಕ್ಕೆ ಕೋಪಗೊಂಡ ತಂದೆ-ಮಗ ಇಬ್ಬರು, ಅರಣ್ಯ ಇಲಾಖೆಯ ದಿನಗೂಲಿ ನೌಕರ ಹಾಗೂ ವಾಚರ್ ತಿಪ್ಪೇಶಿ ಎಂಬವರ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಸಿದ್ದಾರೆ. ಇನ್ನೂ ಈ ವೇಳೆ ಸಕಾಲಕ್ಕೆ ಬಂದ ಸ್ಥಳೀಯರಿಂದ ವಾಚರ್ ತಿಪ್ಪೇಶ್’ರನ್ನು ರಕ್ಷಣೆ ಮಾಡಲಾಗಿದೆ.
ತಕ್ಷಣ ಅವರನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಲ್ಲೆ ಮಾಡಿದವರ ಗುರುತಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಹಿನ್ನೆಲೆ, ಅರಣ್ಯದ ಅಂಚಿನಲ್ಲಿ ನೆಲೆಯೂರಿರುವ ರೈತರಲ್ಲಿ ಆತಂಕ ಮೂಡಿದೆ.