ಕನ್ನಡದ ಖ್ಯಾತ ನಿರೂಪಕಿ ಕಂ ನಟಿ ಅನುಶ್ರೀ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ವರ್ಷ ಮದುವೆ ಆಗಿಯೇ ಆಗುತ್ತೇನೆ ಎಂದು ಈ ಹಿಂದೆ ಅನುಶ್ರೀ ಹೇಳಿದ್ದರು. ಅದರಂತೆ ಇದೀಗ ನಟಿ ಮದುವೆಯಾಗುತ್ತಿದ್ದಾರೆ. ಮೂಲಗಳ ಪ್ರಕಾರ ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ ಹಸೆಮಣೆ ಏರುತ್ತಿದ್ದಾರೆ. ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ರೋಷನ್ ಎಂಬುವವರ ಜೊತೆ ಅನುಶ್ರೀ ಕಲ್ಯಾಣವಾಗುತ್ತಿದ್ದಾರೆ. ಆದರೆ ಹುಡುಗನ ಬಗ್ಗೆ ಅನುಶ್ರೀ ಯಾವುದೇ ಬಿಟ್ಟುಕೊಟ್ಟಿಲ್ಲ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿದೆ ಎಂದು ಅನುಶ್ರೀ ಆಪ್ತರು ತಿಳಿಸಿದ್ದಾರೆ.
ಎಲ್ಲರೂ ಅಂದುಕೊಂಡಂತೆ ಇದು ಲವ್ ಮ್ಯಾರೇಜ್ ಅಲ್ಲ. ಕುಟುಂಬದವರೇ ನೋಡಿ ಗೊತ್ತು ಮಾಡಿರುವ ಪಕ್ಕ ಅರೆಜ್ ಮ್ಯಾರೇಜ್. ಇದೀಗ ಎರಡೂ ಕುಟುಂಬಗಳು ಮದುವೆಯ ಸಂಭ್ರಮದಲ್ಲಿದ್ದು, ಸಕಲ ಸಿದ್ಧತೆಗಳಲ್ಲಿ ತೊಡಗಿವೆ ಎನ್ನಲಾಗಿದೆ.
“ಹುಡುಗ ತುಂಬಾ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಅಷ್ಟೇ ಸಾಕು ನನಗೆ” ಎಂದಿದ್ದರು ನಟಿ ಅನುಶ್ರೀ. ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದಿದೆ. ಕನ್ನಡದಲ್ಲಿ ಬಹು ಬೇಡಿಕೆಯುಳ್ಳ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.