ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಷ್ಮೇಶ್ವರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗದುಗಿನ ಚೇತನ ಕರಾಟೆ ಕ್ಲಬ್ ವಿದ್ಯಾರ್ಥಿಗಳು ಉತ್ತಮ ಸಾಧನೆ ದಾಖಲಿಸಿದ್ದಾರೆ.
ಗಜಾನನ ಷಡಕ್ಷರಿ ಕುಮಟೆ (ತೃತೀಯ), ಕಟಾ (ಪ್ರಥಮ), ವೈಭವ ಮಾ.ಮಾರೋಳ ಕುಮಟೆ (ತೃತೀಯ), ಕಟಾ (ತೃತೀಯ), ಈಶ್ವರಿ ಷಡಕ್ಷರಿ ಕುಮಟೆ (ತೃತೀಯ), ಕಟಾ (ಪ್ರಥಮ), ಸಾಹಿತ್ಯ ಶ್ರೀನಿವಾಸಪುರ ಕುಮಟೆ (ತೃತೀಯ), ಕಟಾ (ತೃತೀಯ) ಸ್ಥಾನಗಳನ್ನು ಪಡೆದು ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ಕರಾಟೆ ಪಟುಗಳಿಗೆ ಚೇತನ ಕರಾಟೆ ಕ್ಲಬ್ನ ಮುಖ್ಯ ಶಿಕ್ಷಕರಾದ ಪರಶುರಾಮ ಹಬೀಬ, ಚೇತನ ಕರಾಟೆ ಕ್ಲಬ್ನ ತರಬೇತುದಾರರಾದ ಚೇತನ ಹಬೀಬ, ದ್ಯಾಮಪ್ಪ ಹಾವೇರಿ, ಪ್ರವೀಣ ಕಾಂಬ್ಳೆ, ಶಿವರಾಜ ಗಡಾದ, ಗಂಗಪ್ಪ ಸಾಸ್ವಿಹಳ್ಳಿ, ಮಹಮ್ಮದ ಇಲಿಯಾಸ್ ನಾಗನೂರ, ಖುಷಿ ವೆರ್ಣೇಕರ ಮತ್ತು ಪಾಲಕರು ಅಭಿನಂದಿಸಿದ್ದಾರೆ.



