ತಿರುವನಂತಪುರಂ:- ಅಪ್ರಾಪ್ತ ಮಗಳ ಮೇಲೆ 3 ವರ್ಷ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
Advertisement
2020 ರಲ್ಲಿ ಕರಿಮನೂರ್ ಬಳಿಯ ಬಾಡಿಗೆ ಮನೆಯಲ್ಲಿದ್ದಾಗ ಅಪರಾಧಿ ಈ ಕೃತ್ಯ ಎಸಗಿದ್ದ. ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗೆ ಕರೆತಂದಾಗ, ತಂದೆಯ ಕೃತ್ಯಗಳಿಂದ ನನಗೆ ಈ ಸಮಸ್ಯೆ ಆಗಿದೆಯೇ ಎಂದು ತಾಯಿಯ ಬಳಿ ಪ್ರಶ್ನಿಸಿತ್ತು. ಏನಾಯಿತು ಎಂದು ತಾಯಿ ವಿವರವಾಗಿ ಕೇಳಿದ ನಂತರ ಮತ್ತು ನಂತರದ ಕೌನ್ಸೆಲಿಂಗ್ ಸಮಯದಲ್ಲಿ ಮಗು ತನ್ನ ತಂದೆಯ ಕೃತ್ಯವನ್ನು ಹೇಳಿತ್ತು. ಬಳಿಕ ಕರಿಮನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿಗೆ ವಿಧಿಸಿದ ದಂಡವನ್ನು ದೌರ್ಜನ್ಯಕ್ಕೊಳಗಾದ ಬಾಲಕಿಗೆ ಕೊಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.