ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಯಾಕಂದ್ರೆ, ಕೆ.ಆರ್ ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಬೈರತಿ ಬಸವರಾಜ್ ಬೆಂಬಲಿಗರೇ ಕೊಂದಿರುವುದಾಗಿ ಎಫ್ಐಆರ್ ದಾಖಲಾಗಿದ್ದು, ಶಾಸಕ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದಾರೆ.
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೈರತಿ ಬಸವರಾಜ್ಗೆ ನೋಟಿಸ್ ಕೊಟ್ಟಿದ್ದಾರೆ. ಪೊಲೀಸರು ಅವರ ಹೇಳಿಕೆ ದಾಖಲಿಸಿಕೊಳುತ್ತಾರೆ. ದೂರು ನೀಡಿರುವವರು ಶಾಸಕರ ಹೆಸರು ಸೇರಿಸಿದ್ದಾರೆ. ಏನೇ ಇರಲಿ, ಪ್ರೊಸೀಜರ್ ಪ್ರಕಾರವೇ ನಡೆಯಬೇಕು. ನೋಟಿಸ್ ಕೊಟ್ಟ ಬಳಿಕ ಅವರು ಬರಲೇಬೇಕು ಎಂದರು.
ಇನ್ನೂ ಬಿಕ್ಲು ಶಿವ ಕೊಲೆಗೆ ಪೊಲೀಸ್ ಸಹಕಾರದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದನ್ನೂ ಕೂಡ ಊಹೆ ಮಾಡಲು ಹೋಗಲ್ಲ. ಎಲ್ಲವೂ ತನಿಖೆಯಲ್ಲಿ ಬರುತ್ತದೆ. ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗುತ್ತದೆ. ಅದು ಅಧಿಕಾರಿಗಳು ಇರಲಿ ಮತ್ತೊಬ್ಬರಿರಲಿ. ತನಿಖೆಯಲ್ಲಿ ಇದೆಲ್ಲವೂ ಕೂಡ ಹೊರಬರುತ್ತದೆ. ಈ ಹಂತದಲ್ಲಿ ನಾವು ಯಾವುದನ್ನೂ ಊಹೆ ಮಾಡಲ್ಲ ಎಂದರು.



