ವಿಜಯಸಾಕ್ಷಿ ಸುದ್ದಿ, ಮುಳಗುಂದ: ನ್ಯಾನೋ ಗೊಬ್ಬರ ಬಳಿಕೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಹೇಳಿದರು.
ಅವರು ಪಟ್ಟಣದ ಸಮೀಪದ ಯಲಿಶೀರೂರ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಅಭಿಯಾನದಡಿ ಬೆಳೆ ಪದ್ಧತಿ ಆಧಾರಿತ ತರಬೇತಿ ಮತ್ತು ನ್ಯಾನೋ ಗೊಬ್ಬರ ಬಳಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ಸತ್ವ ಕಡಿಮೆಯಾಗುತ್ತದೆ. ಇದರಿಂದ ಮಣ್ಣು, ನೀರು, ಪರಿಸರ ಮಾಲಿನ್ಯವಾಗುತ್ತದೆ. ಇಳುವರಿಯೂ ಕುಂಠಿತವಾಗುತ್ತದೆ. ಆದುದರಿಂದ ಮಣ್ಣು, ಗಾಳಿ, ನೀರಿನ ಗುಣಮಟ್ಟ ಕಾಪಾಡುವಲ್ಲಿ ನ್ಯಾನೋ ಯೂರಿಯಾ, ಡಿಎಪಿ ದ್ರವ ಗೊಬ್ಬರ ಸಹಕಾರಿಯಾಗುತ್ತದೆ ಎಂದರು.
ಇಫ್ಕೋ ಸಂಸ್ಥೆಯ ಸಚಿನ್, ಸಹಾಯಕ ಕೃಷಿ ಅಧಿಕಾರಿ ರಾಜೇಶ್ವರಿ, ಇಂಗಳಳ್ಳಿ, ಗುರಿಕಾರ, ಗ್ರಾ.ಪಂ ಅಧ್ಯಕ್ಷ ಮಂಜುನಾಥ ಯಲಿ, ಫಕ್ಕೀರಗೌಡ ಪಾಟೀಲ, ಪರಶುರಾಮ ಹೂಗಾರ, ಮಲ್ಲಪ್ಪ ಹೊನ್ನಪ್ಪನವರ, ಶರಣಪ್ಪ ಡೋಣಿ, ಉದಯ ಹೋನ್ನಪ್ಪನವರ, ಯಲ್ಲಪ್ಪ ಬಾಬಣ್ಣವರ ಇದ್ದರು.



