ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ಕಿಂಗ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಿದ್ದು ಶೂಟಿಂಗ್ ನಲ್ಲಿ ಶಾರುಖ್ ಖಾನ್ ಕೂಡ ಭಾಗಿಯಾಗಿದ್ದರು. ಆದ್ರೆ ಶೂಟಿಂಗ್ ವೇಳೆ ಶಾರುಖ್ ಖಾನ್ ಬೆನ್ನಿಗೆ ಗಾಯವಾಗಿದ್ದು ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಕಿಂಗ್ ಸಿನಿಮಾದ ಶೂಟಿಂಗ್ ಮುಂಬೈನ ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ವೇಳೆ ಶಾರುಖ್ ಖಾನ್ ಸ್ಟಂಟ್ ಮಾಡುತ್ತಿದ್ದು ಆಗ ಅವರಿಗೆ ಮಸಲ್ ಇಂಜೂರಿ ಆಗಿದೆ. ಈ ವೇಳೆ ಮಗಳು ಸೂಹಾನಾ ಖಾನ್ ಕೂಡ ಇದ್ದರು.
ಶಾರುಖ್ ಖಾನ್‌ಗೆ ಗಂಭೀರ ಸಮಸ್ಯೆ ಏನೂ ಆಗಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಅವರು ಅಮೆರಿಕಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ. ಶಾರುಖ್ ಖಾನ್‌ಗೆ ವಯಸ್ಸು 60 ಸಮೀಪಿಸಿದೆ. ಈ ಸಂದರ್ಭದಲ್ಲಿ ಗಾಯಗೊಂಡರೆ ರಿಕವರಿ ಆಗೋಕೆ ಸಾಕಷ್ಟು ಸಮಯ ಬೇಕಿದೆ. ಹೀಗಾಗಿ, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಅಮೆರಿಕಕ್ಕೆ ತೆರಳಲು ನಿರ್ಧಾರಿಸಿದ್ದಾರೆ ಎನ್ನಲಾಗುತ್ತಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ‘ಕಿಂಗ್’ ಚಿತ್ರ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಮತ್ತು ಅಭಯ್ ವರ್ಮಾ ಕೂಡ ನಟಿಸುತ್ತಿದ್ದಾರೆ.