ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ A5 ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರು ಮೊನ್ನೆ ತಾನೇ ಭಾರತೀ ನಗರ ಪೊಲೀಸ್ ಠಾಣೆಯಲ್ಲಿ ಸುಮಾರು 3 ಗಂಟೆ ವಿಚಾರಣೆ ಎದುರಿಸಿ ಬಂದಿದ್ದಾರೆ.
ಇದರ ಬೆನ್ನಲ್ಲೇ ಇದೀಗ ಪ್ರಕರಣ ಸಂಬಂಧ ಶಾಸಕ ಬೈರತಿ ಬಸವರಾಜ್ ಅಣ್ಣನ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅನಿಲ್ ಬಂಧಿತ ಆರೋಪಿ. ಚಿಕ್ಕಪ್ಪ ವಿಚಾರಣೆ ಎದುರಿಸಿ ಹೊರಬಂದ್ರೆ ಇತ್ತ ಅಣ್ಣನ ಮಗ ಲಾಕ್ ಆಗಿದ್ದಾನೆ.
ಭಾರತಿನಗರ ಪೊಲೀಸ್ರು ಅನಿಲ್ ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಬಿಕ್ಲು ಶಿವನ ಕೊಲೆಯಲ್ಲಿ ಭೈರತಿ ಬಸವರಾಜ್ ಅಣ್ಣನ ಮಗನ ರೋಲ್ ಪತ್ತೆಯಾಗಿದೆ. ಕೊಲೆ ಆರೋಪಿಗಳಿಗೆ
ಹಂತಕರಿಗೆ ಕಾರ್ ಒದಗಿಸಿದ್ದು ಇದೇ ಬೈರತಿ ಅಣ್ಣನ ಮಗ ಅನ್ನೋದು ತನಿಖೆಯಲ್ಲಿ ದೃಢವಾಗಿದೆ.
ಕೊಲೆ ದಿನ ಸ್ಕಾರ್ಪಿಯೊ ಕಾರ್ ನಲ್ಲಿ ಬಂದು ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ರು. ಹಂತಕರಿಗೆ ಈ ಕಾರ್ ಒದಗಿಸಿದ್ದೇ ಅನಿಲ್ ಅನ್ನೋದು ತನಿಖೆಯಲ್ಲಿ ಕಂಡುಬಂದಿದೆ. ಮರ್ಡರ್ ಗೆ ಕಾರ್ ಬಳಕೆಯಾಗುತ್ತೆ ಅಂತಾ ಗೊತ್ತಿದ್ದೂ ಕಾರ್ ನೀಡಿದ್ನಾ ಅನಿಲ್..? ಅನ್ನೋದು ಗೊತ್ತಾಗಬೇಕಿದೆ. ಕೊಲೆಗೆ ಬಳಕೆಯಾದ ಕಾರು ಯಾರದ್ದು? ಅಂತ ಪೊಲೀಸರು ತನಿಖೆ ಕೈಗೊಂಡ ಹೊತ್ತಲ್ಲೇ ಅನಿಲ್ ತಲೆ ಮರೆಸಿಕೊಂಡಿದ್ದ. ಸದ್ಯ ಅನಿಲ್ ನ ಪತ್ತೆ ಮಾಡಿ ಡ್ರಿಲ್ ಮಾಡ್ತಿರೊ ಪೊಲೀಸ್ರು, ತನಿಖೆಯಲ್ಲಿ ಇನ್ನೂ ಯಾವೆಲ್ಲಾ ವಿಚಾರಗಳು ಹೊರ ಬರ್ತಾವೆ. ಯಾರ ಬುಡ್ಡಕ್ಕೆ ಕೊಲೆ ಪ್ರಕರಣ ಹೋಗಿ ನಿಲ್ಲಲಿದೆ ಅನ್ನೋದನ್ನ ಕಾದು ನೋಡಬೇಕಿದೆ.