ಚಿತ್ರದುರ್ಗ:- ಭೀಕರವಾಗಿ ಆಟೋ ಡ್ರೈವರ್ ಕೊಂದು ಬಳಿಕ ಶವವನ್ನ ಮೂಟೆಕಟ್ಟಿ ಹಂತಕರು ಎಸೆದು ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಜಾನುಕೊಂಡ ಗ್ರಾಮದ ಬಳಿ ಜರುಗಿದೆ.
Advertisement
ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆ ನಿವಾಸಿ 45 ವರ್ಷದ ರವಿಕುಮಾರ್ ಕೊಲೆಯಾದ ಆಟೋ ಡ್ರೈವರ್. ಯಾರ ಜೊತೆ ದ್ವೇಷ ಇರದೆ ಆಟೋ ಡ್ರೈವರ್ ಆಗಿ ರವಿಕುಮಾರ್ ಕೆಲಸ ಮಾಡುತ್ತಿದ್ದ.
ಆದರೆ ಈ ಕೊಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರು ಶವವನ್ನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಅನ್ವಯ ಚಿತ್ರದುರ್ಗದ ಗ್ರಾಮಾಂತರ ಠಾಣಾ ಪೊಲೀಸರು ಶ್ವಾನ ದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.
ಘಟನೆ ಸಂಬಂದ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.