ಬೆಂಗಳೂರು:- ಬೆಂಗಳೂರಿನ RMC ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮ್ಯಾನ್ ಹೋಲ್ ಗೆ ಇಳಿದು ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಜರುಗಿದೆ.
Advertisement
ಪುಟ್ಟಸ್ವಾಮಿ ಮೃತ ದುರ್ವೈವಿ. ಈತ ಬೆಂಗಳೂರಿನ ಆಶ್ರಯನಗರದ ನಿವಾಸಿ. ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಆಂಥೋನಿ ಹಾಗೂ ಪುಟ್ಟಸ್ವಾಮಿ ಒಳಚರಂಡಿಗೆ ಇಳಿದಿದ್ದರು. ಸುಮಾರು ಅರ್ಧ ಗಂಟೆ ಒಳಗಡೆ ಕೆಲಸ ಮಾಡಿದ್ದಾರೆ. ಬಳಿಕ ಉಸಿರುಗಟ್ಟಿದಂತಾಗಿದ ಮೇಲೆ ಅಂಥೋನಿ ಹಾಗೂ ಪುಟ್ಟಸ್ವಾಮಿ ಆಚೆ ಬಂದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಾಗದೆ ಪುಟ್ಟಸ್ವಾಮಿ ಮನೆಗೆ ತೆರಳಿದ್ದ ವೇಳೆ ಸಾವನ್ನಪ್ಪಿದ್ದಾನೆ.
ಇನ್ನು ಅಸ್ವಸ್ಥಗೊಂಡಿದ್ದ ಆಂಥೋನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಣದ ಆಸೆ ತೋರಿಸಿ ಒಳಚರಂಡಿಗೆ ಇಳಿಸಿರುವ ಶಂಕೆ ವ್ಯಕ್ತವಾಗಿದ್ದು, ಯಾರು ಇಳಿಸಿದ್ದು ಸೇರಿದಂತೆ ಈ ಬಗ್ಗೆ ಇನ್ನಿತರ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.