ನಟಿ ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳ ಜೊತೆ ನಟಿ ಟಾಲಿವುಡ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೇ ಹೊಸ ಬಿಸ್ನೇಸ್ ಶುರು ಮಾಡಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
‘ಇಂದು ನಾನು ತುಂಬ ಮುಖ್ಯವಾದ ಶೂಟಿಂಗ್ಗೆ ತೆರಳುತ್ತಿದ್ದೇನೆ. ನೀವು ಹೇಳಿದ ಬಿಸ್ನೆಸ್ ನಾನು ಆರಂಭಿಸುತ್ತೇನೆ’ ಎಂದು ವಿಡಿಯೋ ಕಾಲ್ ಮೂಲಕ ತಾಯಿ ಸುಮನ್ ಮಂದಣ್ಣಗೆ ರಶ್ಮಿಕಾ ಅವರು ಮಾಹಿತಿ ನೀಡಿದ್ದಾರೆ. ಮಗಳ ಹೊಸ ಕಾರ್ಯಕ್ಕೆ ತಾಯಿ ಶುಭ ಕೋರಿದ್ದಾರೆ. ಆದರೆ ತಾವು ಆರಂಭಿಸುತ್ತಿರುವ ಬಿಸ್ನೆಸ್ ಯಾವುದು ಎಂಬ ಗುಟ್ಟನ್ನು ಮಾತ್ರ ರಶ್ಮಿಕಾ ಬಿಟ್ಟುಕೊಟ್ಟಿಲ್ಲ.
ಮಗಳು ವಿಡಿಯೋ ಕಾಲ್
ರಶ್ಮಿಕಾ ವಿಡಿಯೋ ಕಾಲ್ ಮಾಡಿ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿರುವ ರಶ್ಮಿಕಾ ತಾಯಿ ಸುಮನ್ ಮಂದಣ್ಣ, “ನೀನು ಒಳ್ಳೆಯದನ್ನು ಮಾಡುತ್ತೀ, ಎಂದು ಪ್ರೀತಿಯಿಂದ ಹೇಳಿದರು. ಇದಕ್ಕೆ, ರಶ್ಮಿಕಾ ಹೃತ್ಪೂರ್ವಕವಾಗಿ “ಧನ್ಯವಾದಗಳು” ಎಂದು ಉತ್ತರಿಸಿದರು. ಅವರ ತಾಯಿ “ನೀನು ಗುಡ್, ದೇವರು ನಿನ್ನನ್ನು ಆಶೀರ್ವದಿಸಲಿ” ಎಂದು ಹಾರೈಸಿದರು.
ರಶ್ಮಿಕಾ ತನ್ನ ತಾಯಿ ಯಾವಾಗಲೂ ತನ್ನ ನಿರ್ಧಾರಗಳಿಗೆ ಹೇಗೆ ಮಾರ್ಗದರ್ಶನ ನೀಡಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ವೀಡಿಯೊದ ಜೊತೆಗೆ ಒಂದು ಹೃದಯಸ್ಪರ್ಶಿ ನೋಟ್ ಕುಡಾ ಬರೆದಿದ್ದಾರೆ. “ಅಮ್ಮ ಯಾವಾಗಲೂ ಎಲ್ಲವನ್ನೂ ಮೊದಲು ತಿಳಿದುಕೊಳ್ಳುತ್ತಾರೆ. ಅವರ ಮಾತುಗಳು ಮಬ್ಬು ಮಬ್ಬಾಗಿರೋ ಕಾರಿನ ಗಾಜನ್ನ ಸ್ವಚ್ಛ ಗೊಳಿಸುವಂತೆ.. ರಸ್ತೆಯನ್ನ ಮತ್ತಷ್ಟು ಸುಂದರವಾಗಿ ನೋಡಲು ಸ್ಪೂರ್ತಿದಾಯಕವಾಗಿರುತ್ತವೆ. ರಕ್ಷಣೆ, ಶಕ್ತಿ ಮತ್ತು ಶಾಂತತೆಯ ಭಾವನೆಯನ್ನು ನೀಡುತ್ತದೆ. ನಾನು ಅವಳ ಅನುಮೋದನೆಯನ್ನು ಪಡೆದಾಗ ಅದು ಸರಿಯಾದ ಮಾರ್ಗ ಎಂದು ನಾನು ಭಾವಿಸುತ್ತೇನೆ… ಲವ್ ಯು, ಮಾ!” ಎಂದು ರಶ್ಮಿಕಾ ಬರೆದುದಕೊಂಡಿದ್ದಾರೆ.


