ದೊಡ್ಡಬಳ್ಳಾಪುರ: ನಡು ಬೀದಿಯಲ್ಲಿ ಬಟ್ಟೆ ಹರಿದು ಹೋಗುವ ರೀತಿ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರ ಹೊಡೆದಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಎಸಿ ಕಚೇರಿ ಬಳಿ ನಡೆದಿದೆ.
Advertisement
ನೆಲಮಂಗಲದ ಅರೆಬೊಮ್ಮನಹಳ್ಳಿಯಿಂದ ಸದಸ್ಯರು ರಾಜೀನಾಮೆ ಸಲ್ಲಿಸಲು ಒಟ್ಟಾಗಿ ಆಗಮಿಸಿದ್ದರು. ಈ ಸಂದರ್ಭ ಅಧ್ಯಕ್ಷ ರಂಗಸ್ವಾಮಿ ರಾಜೀನಾಮೆ ನೀಡಲ್ಲ ಎಂದಾಗ ಇತರೆ ಸದಸ್ಯರಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಅಧ್ಯಕ್ಷ ರಂಗಸ್ವಾಮಿ ಮೇಲೆ ಅವಿಶ್ವಾಸಕ್ಕೆ ಮುಂದಾಗಿದ್ದು, ದಲಿತ ಅಧ್ಯಕ್ಷ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೆ ಒಳಗಾದ ಅಧ್ಯಕ್ಷ ಸದ್ಯ ಪೊಲೀಸರ ರಕ್ಷಣೆಯಲ್ಲಿ ಇದ್ದಾರೆ. ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.