ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಚಂದ್ರ ಬರೋಟ್ ಅವರು ತಮ್ಮ 86ನೇ ವರ್ಷಕ್ಕೆ ನಿಧನರಾಗಿದ್ದಾರೆ. ಹಿಂದಿಯಲ್ಲಿ ‘ಡಾನ್’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಬರೋಟ್ ಅವರು ಮುಂಬೈನ ಬಾಂದ್ರಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಂದ್ರ ಬರೋಟ್ ಅವರ ನಿಧನದ ಸುದ್ದಿಯನ್ನು ಅವರ ಕುಟುಂಬಸ್ಥರು ಖಚಿತಪಡಿಸಿದ್ದಾರೆ.
ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರ ಬರೋಟ್ ಅವರ ಆರೋಗ್ಯ ಇತ್ತೀಚೆಗೆ ಬಿಗಡಾಯಿಸಿಕೊಂಡಿತ್ತು. ತಕ್ಷಣವೇ ಅವರನ್ನು ಗುರು ನಾನಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಚಿಕಿತ್ಸೆ ಫಲಕಾರಿ ಆಗದೇ ನಿಧನರಾಗಿದ್ದಾರೆ.
ಚಂದ್ರ ಬರೋಟ್ ನಿರ್ದೇಶನ ಮಾಡಿದ್ದ ‘ಡಾನ್’ ಸಿನಿಮಾ 1978ರಲ್ಲಿ ಬಿಡುಗಡೆ ಆಗಿತ್ತು. ಡಾನ್ ಚಂದ್ರ ಬರೋಟ್ ಅವರ ಮೊದಲ ಸಿನಿಮಾವಾಗದಿದು ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಘಳಿಸಿದ್ದರು. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.



