ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸೋಮವಾರ ಶಿರಹಟ್ಟಿಯಲ್ಲಿ ತಾಲೂಕಾ ಜಾತ್ಯಾತೀತ ಜನತಾದಳದ ವತಿಯಿಂದ ರೈತರಿಗೆ ಯೂರಿಯಾ ಗೊಬರ ಸಮರ್ಪಕ ವಿತರಣೆಯಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್‌ನ ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ರಾಯಸಾಬ ಢಾಲಾಯತ, ಶಿರಹಟ್ಟಿ ತಾಲೂಕಿನ ರೈತರಿಗೆ ಯೂರಿಯಾ ಗೊಬ್ಬರ ಸರಿಯಾಗಿ ವಿತರಣೆ ಆಗುತ್ತಿಲ್ಲ. ಸಂಬಂಧಿಸಿದ ಇಲಾಖೆ, ಸಂಸ್ಥೆಗಳು ಸರಿಯಾಗಿ ವಿತರಣೆ ಮಾಡದೇ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಈ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಿ ರೈತರಿಗೆ ಸಮರ್ಪಕ ಗೊಬ್ಬರ ವಿತರಣೆಯಾಗುವಂತೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿನಾಯಕ ಪರಬತ, ಮಲ್ಲೇಶ ವರವಿ, ಮಾಬುಸಾಬ ಕನಕವಾಡ, ಸುರೇಶ ಲಮಾಣಿ, ಆನಂದ ಸೊರಟೂರ, ಪಕ್ಕಣ್ಣ ತುಳಿ, ಬಸು ಕಲ್ಲಪ್ಪನವರ, ಲಲಿತಾ ಕಲ್ಲಪ್ಪನವರ, ಶರಣಪ್ಪ ಹೂಗಾರ, ವೀರೇಶ ಬಣಗಾರ, ಹನುಮಂತ ಕುರಿ, ಸಿದ್ದಪ್ಪ ತುಳಿ ಉಪಸ್ಥಿತರಿದ್ದರು.