ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿ ಈದ್ಗಾ ಕಮಿಟಿ ವತಿಯಿಂದ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದ್ದು, ಕಳೆದ ವರ್ಷ 28 ಜೋಡಿ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಸೆಪ್ಟೆಂಬರ್ 5ರಂದು ಮುಹಮ್ಮದ್ ಪೈಗಂಬರ್ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ಕಮಿಟಿ ತಿರ್ಮಾನಿಸಿದೆ. ಗದಗ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ, ಗ್ರಾಮಗಳ ಅಲ್ಪಸಂಖ್ಯಾತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನ ನೋಂದಾಯಿಸುವಂತೆ ಗದಗ-ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಜ್ಯ ಉಪಾಧ್ಯಕ್ಷ ಪೀರಸಾಬ್ ಕೌತಾಳ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಟಗೇರಿಯ ರೇಲ್ವೆ ಸ್ಟೇಷನ್ ಹತ್ತಿರ ಇರುವ ಕಲ್ಯಾಣ ಮಂಟಪದಲ್ಲಿ ತಮ್ಮ ಹೆಸರನ್ನು 01-09-2025ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ವಧು-ವರರಿಗೆ ಕಮಿಟಿ ವತಿಯಿಂದ ಉಚಿತವಾಗಿ ಸಮವಸ್ತ್ರ, ಮಾಂಗಲ್ಯ, ಕಾಲುಂಗುರಗಳನ್ನು ನೀಡುವುದಾಗಿ ಅವರು ತಿಳಿಸಿದರಲ್ಲದೆ, ಮಾಹಿತಿಗಾಗಿ ಅಬ್ದುಲಸಲಾಂ ಬಳ್ಳಾರಿ 8660222309, ಅನ್ವರ್ ಈಟಿ-9483606009, ಮುನೀರ್ ಅಹ್ಮದ್-9916919248, ಆರ್.ಎಲ್ ಹೊಂಬಳ-9449329029, ಬಾಬುಸಾಬ-9945727432 ಇವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಫಯಾಜ್ ಅಹ್ಮದ ನಾರಾಯಣಕೆರಿ, ಅನ್ವರ್ ಈಟಿ, ಮುನೀರ್ ಅಹ್ಮದ್, ಅಬ್ದುಲಸಾಬ್ ಬಳ್ಳಾರಿ, ಎಂ.ಎಂ. ಮಾಳೆಕೊಪ್ಪ ಮುಂತಾದವರು ಉಪಸ್ಥಿತರಿದ್ದರು.



