ಧರ್ಮಸ್ಥಳ ಪ್ರಕರಣ: SIT ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯಲ್ಲ – ಪರಮೇಶ್ವರ್

0
Spread the love

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ SIT ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಸ್​ಐಟಿ ತಂಡಕ್ಕೆ ಧರ್ಮಸ್ಥಳಕ್ಕೆ ಹೋಗಿ ತನಿಖಾ ಪ್ರಕ್ರಿಯೆ ಶುರು ಮಾಡುವಂತೆ ಸೂಚಿಸಿದ್ದೇವೆ.

Advertisement

ಸದ್ಯದಲ್ಲೇ ಎಸ್​​ಐಟಿ ತಂಡ ಅಲ್ಲಿಗೆ ಹೋಗಲಿದೆ. ಧರ್ಮಸ್ಥಳ ಪೊಲೀಸರಿಗೂ ಸೂಚನೆ ನೀಡಿದ್ದೇವೆ. ಎಸ್​ಐಟಿ ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯಲ್ಲ. ಹೊರಗೆ ಉಳಿಯೋದಾದ್ರೆ ನಮಗೆ ತಿಳಿಸಲಿ‌. ಆ ನಂತರ ಅದರ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು.

ಎಸ್​ಐಟಿ ತನಿಖೆಗೆ ಬಿಜೆಪಿಯವರಿಂದ ಯಾಕೆ ಆಕ್ಷೇಪ?. ಈಗಿನಿಂದ್ಲೇ ಏನೇನೋ ಫ್ರೇಮ್ ಮಾಡ್ತಿದ್ದಾರೆ. ರಾಜಕೀಯ ಉದ್ದೇಶವಿದೆ ಅಂತ ಯಾಕೆ ಹೇಳ್ತಾರೆ. ಎಸ್​ಐಟಿ ತನಿಖೆಗೆ ಯಾಕೆ ಅವರ ವಿರೋಧ. ಇದನ್ನು ನೋಡಿದ್ರೆ ಅವರ ಮ‌ನಸ್ಸಲ್ಲಿ ಏನೋ ಇರಬಹುದು ಎಂದು ಬಿಜೆಪಿಯವರ ಆಕ್ಷೇಪಕ್ಕೆ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here