ಬೆಂಗಳೂರು: ಬಂಗಾರವು ಒಂದು ಪ್ರಮುಖ ಲೋಹವಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಮತ್ತು ಆರ್ಥಿಕತೆಯಲ್ಲಿ ತುಂಬಾ ಮಹತ್ವದ್ದಾಗಿದೆ. ಚಿನ್ನವು ಹೂಡಿಕೆ, ಆಭರಣಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ.
ಭಾರತ ಸೇರಿ ಪ್ರತಿಯೊಂದು ದೇಶವು ಬಂಗಾರದ ಮೇಲೆ ತಮ್ಮ ಹೂಡಿಕೆಯನ್ನು ಹೆಚ್ಚಾಗಿಸಿವೆ. ಇದಕ್ಕೆ ಕಾರಣ ಇಷ್ಟೇ, ಪೇಪರ್ ಕರೆನ್ಸಿಗಿಂತ ಚಿನ್ನ ಬಹಳ ನಂಬಿಕೆಗೆ ಅರ್ಹ ಎಂದು. ಈ ನಿಟ್ಟಿನಲ್ಲಿ ಬಂಗಾರದ ಮೇಲಿನ ಖರ್ಚು ಹೆಚ್ಚಾಗಿದೆ, ಬೇಡಿಕೆ ಗಗನಕ್ಕೇರಿದೆ, ಬೆಲೆ ದುಬಾರಿಯಾಗಿದೆ. ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಂದು ಭರ್ಜರಿ ಏರಿಕೆ ಪಡೆದಿವೆ.
ಚಿನ್ನದ ಬೆಲೆ 9,380 ರೂ ಮುಟ್ಟಿದೆ. ಚಿನ್ನದ ಇತಿಹಾಸದಲ್ಲೇ ಇದು ಗರಿಷ್ಠ ಬೆಲೆ ಎನಿಸಿದೆ. ಬೆಳ್ಳಿ ಬೆಲೆಯ ದಾಖಲೆ ಓಟ ಮುಂದುವರಿದಿದೆ. ಇವತ್ತೂ ಕೂಡ ಬೆಳ್ಳಿ ಬೆಲೆ ಒಂದು ರೂ ಹೆಚ್ಚಿ 119 ರೂ ಮುಟ್ಟಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 93,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,02,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 93,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,900 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 23ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,800 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,330 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,750 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,190 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,800 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,02,330 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,190 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 93,800 ರೂ
- ಚೆನ್ನೈ: 93,800 ರೂ
- ಮುಂಬೈ: 93,800 ರೂ
- ದೆಹಲಿ: 93,950 ರೂ
- ಕೋಲ್ಕತಾ: 93,800 ರೂ
- ಕೇರಳ: 93,800 ರೂ
- ಅಹ್ಮದಾಬಾದ್: 93,850 ರೂ
- ಜೈಪುರ್: 93,950 ರೂ
- ಲಕ್ನೋ: 93,950 ರೂ
- ಭುವನೇಶ್ವರ್: 93,800 ರೂ