ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಹೊಸ ಬ್ಯುಸಿನೆಸ್ ಶುರು ಮಾಡೋದಾಗಿ ಹೇಳಿದ್ದರು. ಅಲ್ಲದೆ ಬ್ಯುಸಿನೆಸ್ ಆರಂಭಕ್ಕೂ ಮುನ್ನ ತಾಯಿಗೆ ಕರೆ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ಆದ್ರೆ ಯಾವ ಬ್ಯುಸಿನೆಸ್ ಅನ್ನೋದನ್ನ ಮಾತ್ರ ಹೇಳಿರಲಿಲ್ಲ. ಇದೀಗ ನಟಿ ತಮ್ಮ ಹೊಸ ಬ್ಯುಸಿನೆಸ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಡಿಯರ್ ಡೈರಿ ಹೆಸರಿನ ಸುಂಗಧ ದ್ರವ್ಯದ ಬ್ರ್ಯಾಂಡ್ ಶುರು ಮಾಡಿದ್ದಾರೆ. ಈ ಸುಗಂಧ ದ್ರವ್ಯದ ಬಗ್ಗೆ ಇರೋ ಅಟ್ಯಾಚ್‌ಮೆಂಟ್ ಏನು ಅನ್ನೋದನ್ನು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ಸುಗಂಧ ದ್ರವ್ಯ ಅನ್ನೋದು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಒಂದು ರೀತಿ ನಮ್ಮ ನೆನಪುಗಳನ್ನ ಹೇಗೆ ನಮ್ಮ ಮನದಲ್ಲಿ ಹೊತ್ತು ಸಾಗುತ್ತೇವೋ ಹಾಗೆ ಪರ್ಫ್ಯೂಮ್ ಕೂಡ ಚಿಕ್ಕ ಬಾಟಲ್ ಅಲ್ಲಿ ನಮ್ಮ ಜೊತೆಗೇನೆ ಇರುತ್ತದೆ. ಇಂತಹ ಒಂದು ವಿಶೇಷ ಸುಗಂಧ ದ್ರವ್ಯದ ಉದ್ಯಮವನ್ನ ಆರಂಭಿಸಿದ್ದೇವೆ.
ಮೂರು ವಿವಿಧ ಪರಿಮಳದ ಸುಗಂಧ ದ್ರವ್ಯವನ್ನ ಲಾಂಚ್ ಮಾಡಿದ್ದೇವೆ. ಇವುಗಳನ್ನ ರಶ್ಮಿಕಾ ಮಂದಣ್ಣ ಡಿಯರ್ ಡೈರಿ ಮೂಲಕವೇ ಲಾಂಚ್ ಮಾಡಿದ್ದೇವೆ. ಈ ಸುಂಗಂಧ ದ್ರವ್ಯದ ಕಥೆಯನ್ನ ಹೇಗೆ ಹೇಳ್ಬೇಕು. ಯಾವ ರೀತಿ ಪ್ರಸೆಂಟ್ ಮಾಡ್ಬೇಕು. ಹೀಗೆ ಹತ್ತು ಹಲವು ವಿಚಾರಗಳನ್ನ ಯೋಚನೆ ಮಾಡಿಯೇ ಮಾಡಿದ್ದೇವೆ.
ಡಿಯರ್ ಡೈರಿ ಪರ್ಫ್ಯೂಗಳಿಗೆ ವಿಶೇಷ ಹೆಸರು ಇಟ್ಟಿದ್ದೇವೆ. ಪ್ರತಿ ಪರ್ಫ್ಯೂಗೂ ಒಂದೊಂದು ಕಥೆ ಇದೆ. ಅದನ್ನ ವಿಶೇಷವಾಗಿಯೇ ಹೇಳುತ್ತಿದ್ದೇವೆ. ಹಾಗೆ ಈ ಒಂದು ಸುಗಂಧ ದ್ರವ್ಯದ ಜರ್ನಿ ಸುಮ್ನೆ ಏನೂ ಅಲ್ಲ. ಇದರಲ್ಲಿ ಪ್ರೀತಿ ಇದೆ, ಮ್ಯಾಜಿಕ್ ಇದೆ, ನೆನಪುಗಳಿವೆ. ಇದು ಒಂದು ರೀತಿ ಪ್ರೀತಿ ತುಂಬಿದ ಪ್ರಯಾಣವೇ ಆಗಿದೆ ಎಂದು ಡಿಯರ್ ಡೈರಿ ಪರ್ಫ್ಯೂಮ್ ಬಗ್ಗೆ ರಶ್ಮಿಕಾ ಬರೆದುಕೊಂಡಿದ್ದಾರೆ.