ಜು. 26ರಂದು ಕಾರ್ಗಿಲ್ ವಿಜಯೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ, ಗದಗ ಜಿಲ್ಲಾ ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘವು ಜು. 26ರಂದು ಮುಂಜಾನೆ 8.15ಕ್ಕೆ ಗದುಗಿನ ಮಹಾತ್ಮ ಗಾಂಧಿ ಸರ್ಕಲ್ ಬಳಿ 26ನೇ ಕಾರ್ಗಿಲ್ ವಿಜಯೋತ್ಸವ ಆಚರಿಸಲಿದೆ.

Advertisement

1962, 1965, 1971, 1999ರ ಯುದ್ಧದಲ್ಲಿ ಹಾಗೂ ಆಪರೇಷನ್ ಸಿಂಧೂರ್‌ದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಗುವದು. ಹಾಲಿ ಮಾಜಿ ಸೈನಿಕರು, ವೀರನಾರಿಯರು, ಮಾಜಿ ಹಾಲಿ ಪ್ಯಾರಾ ಮಿಲಿಟರಿ ಯೋಧರು ಅಂದು ಬಿಳಿ ಶರ್ಟ್, ನೀಲಿ ಪ್ಯಾಂಟ್, ಜಾಕೆಟ್, ಸಂಘದ ಕ್ಯಾಪ್, ಮೆಡಲ್‌ಗಳನ್ನು ಧರಿಸಿ, ಸರಿಯಾದ ಸಮಯಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘಟಿಕರಾದ ಗೂಳಯ್ಯ ಮಾಲಗಿತ್ತಿಮಠ ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here