ಬೆಂಗಳೂರು:- ನಗರದ ಗೋವಿಂದಪುರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿ ಹಾಡಹಗಲೇ ನಡುರಸ್ತೆಯಲ್ಲಿ ಯುವತಿಯ ತುಟ್ಟಿ ಕಚ್ಚಿ ಎಸ್ಕೇಪ್ ಆಗಿದ್ದ ಬೀದಿ ಕಾಮುಕನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮುಕನೋರ್ವ, ಬೆಂಗಳೂರಿನಂತ ಜನದಟ್ಟಣೆಯುಳ್ಳ ಪ್ರದೇಶದಲ್ಲಿ ನಡುರಸ್ತೆಯಲ್ಲೇ ಹುಚ್ಚಾಟ ಮಾಡಿದ್ದಾನೆ. ಅಂಗಡಿಗೆ ರೇಷನ್ ತರಲು ಹೋಗಿದ್ದ ಯುವತಿಯನ್ನು ಹಿಂಬಾಲಿಸಿ ಅಸಭ್ಯ ವರ್ತನೆ ತೋರಿ ಆಕೆಯ ತುಟಿ ಕಚ್ಚಿದ್ದ. ಜೊತೆಗೆ ಲೈಂಗಿಕವಾಗಿ ಕಿರುಕುಳ ನೀಡಿ ಎಸ್ಕೇಪ್ ಆಗಿದ್ದ. ಮನೆಗೆ ಹೋದ ಯುವತಿ ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ಬಳಿಕ ಯುವತಿ ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ದೂರಿನ ಆಧಾರದ ಮೇಲೆ ಆರೋಪಿ ಪತ್ತೆಗಾಗಿ ಇಳಿದ ಪೊಲೀಸರು, ಕೊನೆಗೂ ಕಾಮುಕನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.



