ಮೈಸೂರು: ಮಹಾರಾಜರ ಕುಟುಂಬದ ಬಗ್ಗೆ ಸಿದ್ದರಾಮಯ್ಯಗೆ ದ್ವೇಷ, ಅಪಥ್ಯ ಭಾವನೆ ಇದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಹಾರಾಜರ ಕುಟುಂಬದ ಬಗ್ಗೆ ಸಿದ್ದರಾಮಯ್ಯಗೆ ದ್ವೇಷ, ಅಪಥ್ಯ ಭಾವನೆ ಇದೆ.
Advertisement
ದೇವರಾಜ ಅರಸುಗಿಂತ ದೊಡ್ಡವರು ನಾನು ಅಂತಾ ಸಿದ್ದರಾಮಯ್ಯ ಹೇಳ್ತಿದ್ದರು. ಈಗ ನಾಲ್ವಡಿ ಕೃಷ್ಣರಾಜ ಮಹಾರಾಜ ಗಿಂತಾ ದೊಡ್ಡವರಾಗಿದ್ದಾರೆ. 10 ವರ್ಷ ಸಿಎಂ ಆಗಿ ಬಿಟ್ಟರೆ ನಾಡದೇವತೆ ಚಾಮುಂಡಿಗಿಂತಾ ದೊಡ್ಡವರು ಆಗಿ ಬಿಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಇನ್ನೂ ನಾಲ್ವಡಿ ಮಹಾರಾಜರು ನಾಡು ಬೆಳಗಿದರು. ಶುದ್ದ ಕುಡಿಯುವ ನೀರಿನ ಘಟಕ ಕಟ್ಟಿ, ಜಲಾಶಯ ಕಟ್ಟಿದ ರೀತಿ ಫೋಸ್ ಕೊಡುವುದು ಬಿಡಿ. ವರ್ಗಾವಣೆಯಲ್ಲಿ ಒಳ್ಳೆ ಕಮಾಯಿ ಮಾಡಿಕೊಂಡು ಅರಾಮಾಗಿ ಇದ್ದಿರಿ ಅಂತ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.