ದಾವಣಗೆರೆ:- ಭಾರೀ ಮಳೆ ಹಿನ್ನೆಲೆ ದಾವಣಗೆರೆ ಮೂಲಕ ಹರಿಯುವ ತುಂಗಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.
Advertisement
ಭದ್ರಾದಿಂದ 39 ಸಾವಿರ ಕ್ಯೂಸೆಕ್ ಹಾಗೂ ತುಂಗಾದಿಂದ 68 ಸಾವಿರ ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ. ಈ ಹಿನ್ನೆಲೆ ನದಿ ಪಾತ್ರದ ಜನರಿಗೆ ಜಾಗೃತವಾಗಿರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ತುಂಗಭದ್ರಾ ನದಿಯಲ್ಲಿ 1,12,170 ಕ್ಯೂಸೆಕ್ ನೀರು ಹರಿಯುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಇನ್ನು ತುಂಗಭದ್ರಾ ನದಿಯ ನೀರು ನುಗ್ಗುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಹೊನ್ನಾಳಿ ನ್ಯಾಮತಿ ಹಾಗೂ ಹರಿಹರಗಳಲ್ಲಿ ಕಾಳಜಿಕೇಂದ್ರ ಸ್ಥಾಪಿಸಲಾಗಿದ್ದು, ಹೊನ್ನಾಳಿ ಪಟ್ಟಣದ ಬಾಲ್‌ರಾಜ್ ಘಾಟ್‌ನಲ್ಲಿ 8 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಹರಿಹರ ಪಟ್ಟಣದ ಗಂಗಾನಗರದಲ್ಲಿಯೂ ಕಾಳಜಿ ಕೇಂದ್ರ ತೆರೆಯಲಾಗಿದೆ.