ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಆ್ಯಂಡ್ ನಟಿ ರಮ್ಯಾ ವಾರ್ ಜೋರಾಗಿದೆ. ಅಭಿಮಾನಿಗಳ ಮೆಸೇಜ್, ಕೆಟ್ಟ ಪದ ಬಳಕೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡೋದಾಗಿಯೂ ಹೇಳಿದ್ದಾರೆ.
ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಮೂರ್ಖನನ್ನ ಅವನ ಮಾತಿನಿಂದ ಗುರುತಿಸಬಹುದು. ಮತ್ತು ಬುದ್ದಿವಂತನನ್ನ ಮೌನದಿಂದ ಗುರುತಿಸಬಹುದು ಎಂದು ಬರೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ರಮ್ಯಾ ಪೋಸ್ಟ್ ಹಾಕಿದ್ದೇ ತಡ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ನಟಿ ರಮ್ಯಾಗೆ ಕೆಟ್ಟ ಕೆಟ್ಟ ಮೆಸೇಜ್ ಮಾಡಿದ್ದಾರೆ. ಈ ಮೆಸೇಜ್‌ಗಳನೆಲ್ಲಾ ರಮ್ಯಾ ತಮ್ಮ ಇನ್‌ಸ್ಟ್ರಾಗಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇದರಿಂದ ಮತ್ತಷ್ಟು ಜೋರಾಗಿ ಈ ಸುದ್ದಿ ಸದ್ದು ಮಾಡ್ತಿದೆ. ಕೆಟ್ಟದಾಗಿ ಮೆಸೇಜ್ ಮಾಡಿದವರ ವಿರುದ್ಧ ರಮ್ಯಾ ದೂರು ನೀಡೋದಕ್ಕೆ ಮುಂದಾಗಿದ್ದಾರೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ರಮ್ಯಾ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ.