Nimisha Priya: ಕೇರಳ ನರ್ಸ್ ನಿಮಿಷ ಪ್ರಿಯಾ ಮರಣ ದಂಡನೆ ಸಂಪೂರ್ಣ ರದ್ದು!

0
Spread the love

ನವದೆಹಲಿ:- ಯೆಮನ್‌ ದೇಶದಲ್ಲಿ ಕೇರಳದ ನಿಮಿಷ ಪ್ರಿಯಾ ಎಂಬ ನರ್ಸ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

Advertisement

ಭಾರತ ಈ ಮಹಿಳೆಗೆ ಯೆಮೆನ್​​ನಲ್ಲಿ ಮರಣದಂಡನೆ ಶಿಕ್ಷೆ ಎಂಬ ವಿಚಾರ ಅನೇಕರಿಗೆ ಬೇಸರ ತರಿಸಿತ್ತು. ಗಲ್ಲು ಶಿಕ್ಷೆ ತಪ್ಪಿಸಲು ಭಾರತ ಸರ್ಕಾರ ಶತ ಪ್ರಯತ್ನ ಮಾಡಿತು. ಇದೀಗ ಮರಣ ದಂಡನೆ ರದ್ದಾಗಿದ್ದು, ನಿಮಿಷ ಪ್ರಿಯಾ ಮರುಜೀವ ಪಡೆದುಕೊಂಡಿದ್ದಾರೆ. ಈ ಬಗ್ಗೆ ಭಾರತದ ಗ್ರಾಂಡ್ ಮುಫಿ ಕಾಂತಪುರಂ ಎಪಿ ಅಬುಬಕರ್ ಮುಸ್ಲಿಯಾರ್ ಅವರ ಕಚೇರಿ ಸ್ಪಷ್ಟಪಡಿಸಿದೆ.

ತಿಂಗಳುಗಳ ಕಾಲ ಉನ್ನತ ಮಟ್ಟದ ರಾಜತಾಂತ್ರಿಕ ಮಧ್ಯಸ್ಥಿಕೆ ಮತ್ತು ಯೆಮೆನ್‌ನ ರಾಜಧಾನಿ ಸನಾದಲ್ಲಿ ನಡೆದ ಕೊನೆಯ ಕ್ಷಣದ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದ್ದು, ಈ ಹಿಂದೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಯೆಮೆನ್ ಸರ್ಕಾರದಿಂದ ಅಧಿಕೃತ ಲಿಖಿತ ದೃಢೀಕರಣ ಇನ್ನೂ ಬಂದಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ.


Spread the love

LEAVE A REPLY

Please enter your comment!
Please enter your name here