ಮಂಗಳೂರು: ಧರ್ಮಸ್ಥಳ ಪ್ರಕರಣದ ಸತ್ಯಾನ್ವೇಷಣೆಗೆ ಇಳಿದ ಸರ್ಕಾರ, SIT ರಚಿಸಿ ಸಮಾಧಿ ರಹಸ್ಯಕ್ಕೆ ಕೈಹಾಕಲಾಗಿದೆ. ಮೊದಲು ಗುರುತಿಸಿದ್ದ ಸ್ಥಳದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. 10ಕ್ಕೂ ಹೆಚ್ಚು ಕಾರ್ಮಿಕರು ಕಷ್ಟಪಟ್ಟ ನಂತರ ಜೆಸಿಬಿಗಳು ಬಂದವು. ಉತ್ಖನನ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ಇದೀಗ ಇಂದು ಬೆಳಗ್ಗೆ 11 ಗಂಟೆಯಿಂದ ಸಾಕ್ಷಿ ದೂರುದಾರ ವ್ಯಕ್ತಿ ತೋರಿಸಿದ ಎರಡನೇ ಜಾಗದಲ್ಲಿ ಶೋಧ ಕಾರ್ಯ ನಡೆಯಿತು. ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗಡೆ ಮಧ್ಯಾಹ್ನ 12:30ರವರೆಗೂ ಶೋಧ ಕಾರ್ಯ ನಡೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ಅರಣ್ಯ ಪ್ರವೇಶದ ಆರಂಭದಲ್ಲೇ ಇರುವ ಎರಡನೇ ಜಾಗವಿದ್ದು ಪಂಚಾಯತ್‌ನ ಇಪ್ಪತ್ತು ಮಂದಿ ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಯಿತು. ಆರಂಭದಲ್ಲಿ ಉದ್ದಕ್ಕೆ ಆರು ಅಡಿ, ಅಗಲಕ್ಕೆ ಐದು ಅಡಿ ಜಾಗ ಗುರುತಿಸಿ ಅಗೆಯಲಾಯಿತು.
ಅರಣ್ಯದ ಒಳಗಡೆ ಉತ್ಕನನ ನಡೆಸಲು ಯಂತ್ರ ಬಳಸಲು ಅನುಮತಿ ಇಲ್ಲದ ಕಾರಣ ಕಾರ್ಮಿಕರಿಂದಲೇ ಶೋಧ ಕಾರ್ಯ ನಡೆಸಲಾಯಿತು. ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಖುದ್ದು ಸ್ಥಳದಲ್ಲಿದ್ದಾರೆ.