IND vs ENG: 5ನೇ ಟೆಸ್ಟ್ ಪಂದ್ಯ: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ!

0
Spread the love

ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ 336 ರನ್​ಗಳಿಂದ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು. ಮೂರನೇ ಮ್ಯಾಚ್​ನಲ್ಲಿ 22 ರನ್​ಗಳ ಜಯ ಸಾಧಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು. ಹಾಗೆಯೇ ನಾಲ್ಕನೇ ಪಂದ್ಯವನ್ನು ಟೀಮ್ ಇಂಡಿಯಾ ಡ್ರಾನಲ್ಲಿ ಕೊನೆಗೊಳಿಸಿದೆ.

Advertisement

ಇದೀಗ ಐದನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿದ್ದು, ಐದನೇ ಟೆಸ್ಟ್ ಪಂದ್ಯವು ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿದ್ದು, ಟಾಸ್​ ಗೆದ್ದ ಇಂಗ್ಲೆಂಡ ಬೌಲಿಂಗ್ ಆಯ್ಕೆಮಾಡಿಕೊಂಡಿದೆ. ಸರಣಿಯಲ್ಲಿ 2-1 ರಿಂದ ಇಂಗ್ಲೆಂಡ್‌ನ ಮುನ್ನಡೆಯಲ್ಲಿದೆ. ಹಾಗಾಗಿ ಇಂಗ್ಲೆಂಡ್​ಗಿಂತ ಭಾರತಕ್ಕೆ ಈ ಪಂದ್ಯ ಹೆಚ್ಚು ಮಹತ್ವದ್ದಾಗಿದೆ.

ಭಾರತ ತಂಡದಲ್ಲಿ 4 ಬದಲಾವಣೆ ಮಾಡಿಕೊಳ್ಳಲಾಗಿದೆ. ಬುಮ್ರಾ ವಿಶ್ರಾಂತಿ ಪಡೆದರೆ, ಗಾಯದ ಕಾರಣ ಪಂತ್ ಹೊರಬಿದ್ದಿದ್ದಾರೆ. ಶಾರ್ದೂಲ್ ಠಾಕೂರ್ ಹಾಗೂ ಅನ್ಶುಲ್ ಕಾಂಬೋಜ್ ಕೂಡ ಈ ಪಂದ್ಯದಲ್ಲಿ ಅವಕಾಶ ಕಳೆದುಕೊಂಡಿದ್ದಾರೆ. ಇವರಿಬ್ಬರು 4ನೇ ಟೆಸ್ಟ್​​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.

ಪಂತ್​ ಜಾಗಕ್ಕೆ ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ತಂಡ ಸೇರಿಕೊಂಡರೆ, ಶಾರ್ದೂಲ್ ಠಾಕೂರ್ ಬದಲಿಗೆ ಕರುಣ್ ನಾಯರ್ ಸೇರಿಕೊಂಡಿದ್ದಾರೆ. ಕಾಂಬೋಜ್ ಹಾಗೂ ಬುಮ್ರಾ ಬದಲಿಗೆ ಆಕಾಶ್ ದೀಪ್ ಹಾಗೂ ಪ್ರಸಿಧ್ ಕೃಷ್ಣ ತಂಡ ಸೇರಿಕೊಂಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here