ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯೇ ಶಿಕ್ಷಕರ ಗುರಿ

0
filter: 0; fileterIntensity: 0.0; filterMask: 0; hdrForward: 0; highlight: true; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 35;
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಗದಗ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ ಹೇಳಿದರು.

Advertisement

ಅವರು ಪಟ್ಟಣದ ಸಮೀಪದ ಬಾಸಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತಿ ಶಿಕ್ಷಕಿ ಎಸ್.ಎಸ್. ಹುಲ್ಲಲ್ಲಿಯವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಹೆತ್ತ ತಂದೆ-ತಾಯಿ, ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು. ನಿವೃತ್ತಿ ಸಹಜವಾದ ಪ್ರಕ್ರಿಯೆ. ತಮ್ಮ ವೃತ್ತಿಯ ಸಮಯದಲ್ಲಿ ಕಾಯಕ ನಿಷ್ಠೆಯಿಂದ ಮಕ್ಕಳಿಗೆ ಅಪಾರ ಜ್ಞಾನ ನೀಡಿದ ಶಿಕ್ಷಕರಿಗೆ ಮಕ್ಕಳು ಶ್ರೇಯೋಭಿವೃದ್ಧಿ ಹೊಂದಿದಾಗ ಆತ್ಮತೃಪ್ತಿ ಸಿಗುತ್ತದೆ ಎಂದರು.

ಅಧ್ಯಕ್ಷತೆಯನ್ನು ದ್ಯಾಮಣ್ಣ ಗಂಟೆಣ್ಣವರ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಕವಲೂರ, ಎಸ್.ಆರ್. ಭಂಡಿ, ಎಂ.ಎಂ. ಮೇಗಲಮನಿ, ಸಿ.ಆರ್.ಪಿ ಎಂ.ಎಂ. ನಿಂಬನಯ್ಕರ, ಶಾಲಾ ಪ್ರಧಾನ ಗುರು ಬಿ.ವಿ. ಹುಡೇದ, ಪಿ.ಬಿ. ಕೆಂಚನಗೌಡರ ಇದ್ದರು.


Spread the love

LEAVE A REPLY

Please enter your comment!
Please enter your name here