ಡಾ. ರಾಜ್ ಕುಮಾರ್ ಸಹೋದರಿ ನಾಗಮ್ಮ (92 ) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮಚಾಮರಾಜನಗರದ ಗಾಜನೂರಿನ ಸ್ವಗ್ರಹದಲ್ಲಿ ನಿಧನರಾಗಿದ್ದು, ರಾಜ್ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ಇಂದು ತಮ್ಮ 92ನೇ ವಯಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
Advertisement
ಅಪ್ಪು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರುಗಳಿಗೆ ಬಲು ಪ್ರೀತಿಯ ನಾಗತ್ತೆಯಾಗಿದ್ದರು ನಾಗಮ್ಮ. ದೊಡ್ಮನೆ ಕುಟುಂಬದವರು ಗಾಜನೂರಿಗೆ ಹೋದಾಗಲೆಲ್ಲ ನಾಗಮ್ಮತ್ತೆಯನ್ನು ತಪ್ಪದೆ ಭೇಟಿ ಆಗಿ ಬರುತ್ತಿದ್ದರು.
ದೊಡ್ಮನೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ ನಾಗಮ್ಮ ಅವರು ಇರುತ್ತಿದ್ದರು. ಆದರೆ ವಯಸ್ಸಿನ ಕಾರಣ ಕಳೆದ ಕೆಲ ವರ್ಷಗಳಿಂದ ಅವರು ಗಾಜನೂರಿನಲ್ಲಿಯೇ ನೆಲೆಸಿದ್ದರು. ವಯಸ್ಸಾಗಿದ್ದ ಕಾರಣ, ಅವರಿಗೆ ಆಘಾತ ಆಗಬಾರದೆಂದು ಪುನೀತ್ ರಾಜ್ಕುಮಾರ್ ನಿಧನದ ಸುದ್ದಿಯನ್ನು ಅವರಿಗೆ ಕುಟುಂಬದವರು ತಿಳಿಸಿರಲಿಲ್ಲ.