ಮಂಡ್ಯ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಕ್ಕೆ ಸಾಕ್ಷಿ ಸಿಕ್ತಾ ಅನ್ನೋ ಪ್ರಶ್ನೆಗಳು ಹಬ್ಬಿವೆ. ಪಾಯಿಂಟ್-6ರಲ್ಲಿ ತನಿಖೆಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು, ದೂರುದಾರ ಮಾರ್ಕ್ ಮಾಡಿದ್ದ ಸ್ಥಳದಲ್ಲಿ ಮಾನವ ದೇಹದ ಮೂಳೆಗಳು ಸಿಕ್ಕಿವೆ. ಸದ್ಯ ಅವಶೇಷಗಳು ಸಿಕ್ಕ ಸ್ಥಳಕ್ಕೆ SIT ಹೆಚ್ಚಿನ ಭದ್ರತೆ ಕ್ರಮ ಕೈಗೊಂಡಿದ್ದು,
Advertisement
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಆರೋಪ ಮಾಡುವುದು ತುಂಬಾ ಸುಲಭ. ಆರೋಪ ಸಾಬೀತು ಆಗುವವರೆಗೆ ಏನೇನೋ ಮಾತಾಡೋದು ಸರಿಯಲ್ಲ,
ಯಾರೋ ಒಬ್ಬರು ಏನೋ ಹೇಳಿದ ತಕ್ಷಣ ನಿಜ ಆಗುಬೇಕು ಅಂತಾ ಇಲ್ಲ. ಜವಾಬ್ದಾರಿ ಇರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯ ಸತ್ಯತೆ ಹೊರ ಬರುತ್ತದೆ. ಪ್ರತಿಯೊಬ್ಬರು ನಾವೇ ಒಂದೊಂದು ಜಡ್ಜ್ಮೆಂಟ್ ಕೊಡಬಾರದು ಎಂದು ಹೇಳಿದರು.