ವಿಜಯಸಾಕ್ಷಿ ಸುದ್ದಿ, ಗದಗ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಎಂ.ಜಿ. ಚಾರಿಟೇಬಲ್ ಟ್ರಸ್ಟ್ ಗದಗ ಇವರ ಸಹಯೋಗದಲ್ಲಿ ಗದಗ ಶಹರ ವಲಯದ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ/ಉರ್ದು ಭಾಷೆಗಳಲ್ಲಿ ಲೇಖನ ಬರವಣಿಗೆ ಸ್ಪರ್ಧೆ ಆಯೋಜಿಸಲಾಗಿತ್ತು.
ನೂರಾನಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ. ಪಿ.ಕೆ. ನೂರಾನಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಯುವ ಮುಖಂಡ ಖಾಲಿದ್ ಕೊಪ್ಪಳ ಮಾತನಾಡಿ, ಯಾವ ಮಗುವಿನ ಬರವಣಿಗೆ ಉತ್ತಮವಾಗಿರುತ್ತದೆಯೋ ಅವನು ಮುಂದೆ ಓದಿನಲ್ಲಿ ಆಸಕ್ತಿ ಪಡೆಯುತ್ತಾನೆ ಎಂದರು.
ಶಹರ ವಲಯದ ಬಿಆರ್‌ಪಿ ಎಂ.ಎ. ಯರಗುಡಿ, ಎಸ್.ಎನ್. ಬಳ್ಳಾರಿ, ದಿವ್ಯ ಸಾನ್ನಿಧ್ಯ ವಹಿಸಿದ್ದ ಎಂ.ಜಿ. ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಮೌಲಾನ ಅಬ್ದುಲ ಗಪೂರ್, ತಾ.ಪಂ ಯೋಜನಾಧಿಕಾರಿ ಜಿ.ಬಿ. ಕಿಲಬನವರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟಪ್ಪನವರ ಮಾತನಾಡಿದರು.
ಈ ಸಂದರ್ಭದಲ್ಲಿ ದೀಪ ಎಂ.ಮೇಟಿ, ಶ್ವೇತಾ ಅಂಜಿಖಾನೆ, ಅಥರ್ ತಡಸದ, ಶಾಹಿನ ಕೊಪ್ಪಳ, ಅರ್ಷಿಯಾ ಫಣಿಬಂದ, ಸೋಫಿಯಾ ನದಾಫ್, ಐಮನ್ ಗುಜಮಾಗಡಿ ಮುಂತಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಗದಗ ಶಹರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮಂಗಳಗುಡ್ಡ, ಕಾರ್ಯದರ್ಶಿ ಕನಾಜ, ಖಜಾಂಚಿ ರಶೀದ, ಅಬ್ದುಲ್ ಕಲಾಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಹಮದ್ ಖಾಜಿ, ಬೋದ್ಲೆಖಾನ್, ಸಿಆರ್‌ಪಿಗಳು, ಶಾಲೆಯ ಮುಖ್ಯೋಪಾಧ್ಯಾಯ ನಮಾಜಿ ಸೇರಿದಂತೆ ಶಿಕ್ಷಕ ವೃಂದದವರು ಟ್ರಸ್ಟ್ನ ಸ್ವಯಂಸೇವಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗದಗ ತಾಲೂಕಿನ ಪ್ರಧಾನಮಂತ್ರಿ ಪೋಷಣ ಅಭಿಯಾನದ ಸಹಾಯಕ ನಿರ್ದೇಶಕ ಶಂಕರ ಹಡಗಲಿ, ವಿದ್ಯಾರ್ಥಿಗಳಲ್ಲಿ ಬರವಣಿಗೆ ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಓದು-ಬರಹ ಅಭಿರುಚಿ ಹೆಚ್ಚಾಗಬೇಕು. ಇಲಾಖೆಯೊಂದಿಗೆ ಸೇರಿ ಇಂತಹ ಅತ್ಯುತ್ತಮ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯ ಎಂದರು.