ನಿಮ್ಮ ಕುಟುಂಬ, ಭವಿಷ್ಯದ ಬಗ್ಗೆ ಗಮನವಿಟ್ಟು ಪೋಸ್ಟ್ ಮಾಡಿ: ಸುಮಲತಾ ಅಂಬರೀಶ್

0
Spread the love

ಸೋಷಿಯಲ್‌ ಮೀಡಿಯಾದಲ್ಲಿ ನಟಿ ರಮ್ಯಾ ಹಾಗೂ ನಟ ದರ್ಶನ್‌ ಅಭಿಮಾನಿಗಳ ಜಟಾಪಟಿ ಸಖತ್‌ ಜೋರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತೀರ್ಪಿನ ಬಗ್ಗೆ ಮಾತನಾಡಿದ್ದಕ್ಕೆ ದರ್ಶನ್‌ ಅಭಿಮಾನಿಗಳು ರಮ್ಯಾ ವಿರುದ್ಧ ಆಕ್ರೋಶಗೊಂಡಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್‌ ಹಾಕಿದ್ದು ಈ ಬಗ್ಗೆ ನಟಿ ರಮ್ಯಾ ದೂರು ದಾಖಲಿಸಿದ್ದಾರೆ. ಈ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ಸಮಲತಾ ಅಂಬರೀಶ್‌ ಪ್ರತಿಕ್ರಿಯಿಸಿದ್ದು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ.

Advertisement

ನಟಿ ರಮ್ಯಾ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್‌ ಮಾಡಿರುವ ಕುರಿತು ಮಾತನಾಡಿರುವ ಸುಮಲತಾ ಅಂಬರೀಶ್‌, ಹೆಣ್ಣು ಮಕ್ಕಳಿಗೆ ಕೆಟ್ಟ ರೀತಿಯ ಕಮೆಂಟ್ ಮಾಡಬಾರದು. ನಾನು ರಮ್ಯಾ ಅವರ ಸೋಶಿಯಲ್ ಮೀಡಿಯಾ ನೋಡಿಲ್ಲ. ಅವರಿಗೆ ಯಾವ ರೀತಿಯ ಕಮೆಂಟ್ ಮಾಡಿದ್ದಾರೆ ಯಾರು ಮಾಡಿದಾರೆ ಎಂದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಅಷ್ಟೇ ನಾನು ಇದ್ದನ್ನು ನೋಡಿದ್ದೇನೆ. ರಮ್ಯಾ ಅವರು ಪೊಲೀಸ್‌ಗೆ ದೂರು ನೀಡಿದ್ದಾರೆ. ಪೊಲೀಸ್ ತನಿಖೆ ಮಾಡಿ ತಪ್ಪು ಮಾಡಿದರವ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನಮ್ಮ ಸರ್ಕಾರ ಪೊಲೀಸ್ ಅವರು ರಮ್ಯಾಗೆ ಸ್ಪಂದಿಸುತ್ತಾರಾ? ಜನರಿಗೂ ಹೀಗೆ ಸ್ಪಂದಿಸಿದರೆ ಸ್ವಾಗತ. ನ್ಯಾಯ ಎನ್ನೋದು ಪ್ರತಿಯೊಬ್ಬರಿಗೂ ಸಿಗಬೇಕು ಎಂದಿದ್ದಾರೆ.

ಇನ್ನೂ, ದರ್ಶನ್​ ವಿಚಾರವಾಗಿ ಮಾತಾಡಿದ ಸುಮಲತಾ ಅಂಬರೀಶ್, ದರ್ಶನ್​ ಅವರನ್ನು ಮಾಧ್ಯಮದವರು ಸಂಪರ್ಕ ಮಾಡಿದಾರೋ ಇಲ್ವೋ ಗೊತ್ತಿಲ್ಲ. ಇತ್ತೀಚೆಗೆ ದರ್ಶನ್ ಮಾಧ್ಯಮಗಳ ಜೊತೆ ಮಾತಾಡಿಲ್ಲ. ನಾನು ದರ್ಶನ್ ಪರವಾಗಿ ಹೇಳಿದರೆ ತಪ್ಪಾಗುತ್ತೆ. ನಾನು ಯಾವ ನಟನ ಅಭಿಮಾನಿಗೂ ವಿಶೇಷವಾಗಿ ಹೇಳಲ್ಲ. ಎಲ್ಲರಿಗೂ ಸಹ ನಾನು ಹೇಳ್ತೀನಿ. ಇನ್ನೂ ದರ್ಶನ್ ಅಭಿಮಾನಿಗಳೇ ಮಾಡಿದ್ದಾರೆ ಎನ್ನೋದಕ್ಕೆ ಆಧಾರ ಇಲ್ಲ. ದರ್ಶನ್ ಅಭಿಮಾನಿಗಳೇ ಮಾಡಿದ್ರೆ ನಾನು ಮನವಿ ಮಾಡ್ತೀವಿ. ಈ ರೀತಿ ಯಾರು ಮಾಡಬೇಡಬೇಡಿ. ನಿಮ್ಮ ಬದುಕಿನ ಬಗ್ಗೆ ಗಮನವರಿಸಿ. ನಿಮ್ಮ ಕುಟುಂಬ, ಭವಿಷ್ಯದ ಬಗ್ಗೆ ಗಮನವಿಟ್ಟು ಪೋಸ್ಟ್ ಮಾಡಿ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here