ದೊಡ್ಡಬಳ್ಳಾಪುರ: ಮಂಡ್ಯದಲ್ಲಿ ಸಚಿವ ಚೆಲುವನಾರಾಯಣಸ್ವಾಮಿ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೇ ನೀಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ನಾನು ಬೆಳಿಗ್ಗೆ ಕೂಡ ಚೆಲುವನಾರಾಯಣಸ್ವಾಮಿ ಬಳಿ ಮಾತನಾಡಿದ್ದೇನೆ.
Advertisement
ಅವರು ರೈತರಿಗೆ ಕೇವಲ ಆರು ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ನೀಡಿರುವುದಾಗಿ ಹೇಳಿದ್ದಾರೆ. ಆದರೆ, ಅವರ ಬಳಿ 8 ಲಕ್ಷ ಟನ್ ಗೊಬ್ಬರ ಇದೆ. ಕೇಂದ್ರದಿಂದ ಇನ್ನೂ 15 ಸಾವಿರ ಟನ್ ರಸಗೊಬ್ಬರ ಬರಲಿದೆ,” ಎಂದು ಹೇಳಿದರು.
ಇನ್ನೂ ರೈತರಿಗೆ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರವನ್ನು ನಾವು ಕಡಿಮೆ ಮಾಡಿಲ್ಲ. ಈ ಬಾರಿ ಮುಂಗಾರು ಬೇಗ ಬಂದಿರುವುದರಿಂದ ಖರ್ಚು ಜಾಸ್ತಿ ಆಗಿರಬಹುದು. ಆದರೆ ರೈತರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದರು.