ಬೆಂಗಳೂರು:- ಕರ್ನಾಟಕದ ಚುನಾವಣೆಯಲ್ಲೂ ಅಕ್ರಮ ನಡೆದಿರೋದನ್ನು ರಾಹುಲ್ ಪತ್ತೆ ಮಾಡಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡೋದು ಪ್ರತಿಯೊಬ್ಬ ನಾಗರಿಕನ ಹಕ್ಕು, ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ನಿಮಿತ್ತ ಅದು ಹಾಳಾಗಬಾರದು. ಕರ್ನಾಟಕದಲ್ಲೂ ಚುನಾವಣೆಗಳ ಸಂದರ್ಭದಲ್ಲಿ ಅಕ್ರಮಗಳು ನಡೆದಿರುವುದನ್ನು ರಾಹುಲ್ ಪತ್ತೆ ಮಾಡಿದ್ದಾರೆ, ಹಾಗಾಗಿ ಬೆಂಗಳೂರು ನಗರದಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಲಿದ್ದಾರೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಕ್ರಮ ನಡೆದಿರುವುದನ್ನು ತಾನೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದೆ, ಅದರೆ ಎರಡೂ ಕಡೆಯಿಂದ ತನಗೆ ಜವಾಬು ಬಂದಿರಲಿಲ್ಲ ಎಂದು ಸುರೇಶ್ ಹೇಳಿದರು.