ಬಿಜೆಪಿ ಅವರು ಕಳ್ಳ ಪಟ್ಟಿ ಸೃಷ್ಟಿಸಿ ವೋಟ್‌ ಹಾಕಿಸಿಕೊಂಡಿದ್ದಾರೆ: ಹರಿಪ್ರಸಾದ್

0
Spread the love

ಮಡಿಕೇರಿ: ಬಿಜೆಪಿ ಅವರು ಕಳ್ಳ ಪಟ್ಟಿ ಸೃಷ್ಟಿಸಿ ವೋಟ್‌ ಹಾಕಿಸಿಕೊಂಡಿದ್ದಾರೆ ಎಂದು ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾತ್ರವಲ್ಲ ಇಡೀ ರಾಷ್ಟ್ರದಲ್ಲೇ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿರುವುದು ಕಂಡುಬರುತ್ತಿದೆ. ಚುನಾವಣಾ ಆಯೋಗ ಅಂತೂ ನಾವು ಪಕ್ಷ ಸೇರಲ್ಲ, ಹೊರಗೆ ನಿಂತು ಬೆಂಬಲ ಕೋಡುತ್ತೇವೆ ಅನ್ನೋ ಪರಿಸ್ಥಿತಿಗೆ ಬಂದಿದೆ.

Advertisement

ಮಹಾರಾಷ್ಟ್ರದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಡೆಯುವ ಸಮಯದಲ್ಲಿ ಸುಮಾರು 60 ಲಕ್ಷ ಮತದಾರರ ಸಂಖ್ಯೆ ಜಾಸ್ತಿಯಾಗಿದೆ. ಹರಿಯಾಣದಲ್ಲೂ ಅದೇ ಪರಿಸ್ಥಿತಿ ಇದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಮತಗಳ್ಳತನ ಮಾಡಿದ್ದಾರೆ. ಕಳ್ಳ ಮತದಾರರ ಪಟ್ಟಿ ಸೃಷ್ಟಿ ಮಾಡಿ ಮತಗಳನ್ನ ಹಾಕಿಸಿಕೊಂಡಿರುವುದು ಕಂಡುಬಂದಿದೆ‌‌. ಹಾಗಾಗಿ ರಾಹುಲ್‌ ಗಾಂಧಿ ಅವರೇ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ʻಕಾಂಗ್ರೆಸ್‌ ಗೆದ್ದಾಗ ಮತದಾರರ ಪಟ್ಟಿ ದುರುಪಯೋಗ ಆಗಿಲ್ವಾ?ʼ ಎಂಬ ಬಿಜೆಪಿಗರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್‌ 136 ಹಾಗೂ 140 ಸ್ಥಾನ ಗೆದ್ದಿದ್ದೇವೆ. ಆದ್ರೆ ಕೆಲ ಭಾಗದಲ್ಲಿ ವಲಸಿಗರು ಜಾಸ್ತಿ ಇದ್ದಾರೆ. ಅವರನ್ನ ದುರುಪಯೋಗ ಮಾಡಿಕೊಂಡು ಮತದಾನ ಮಾಡಿಸಿದ್ದಾರೆ. ಬೆಂಗಳೂರಿನ ರಾಜಾಜೀನಗರ, ಮಹದೇವಪುರದಲ್ಲಿ ಇನ್ನೂ ಕೆಲ ಭಾಗಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸೋತ್ತಿರುವುದು 33,000 ಸಾವಿರದಲ್ಲಿ ಮಾತ್ರ, ಅದು ಹೊರಗಡೆ ಬಂದಾಗ ಗೋತ್ತಾಗುತ್ತೆ. ಒಂದೇ ಮನೆಯಲ್ಲಿ 1,000 ಮತ ತೋರಿಸಿದಾಗ ಅಕ್ರಮ ಅಲ್ಲದೇ ಬೇರೇನು ಗೊತ್ತಾಗುತ್ತೆ ಅಂತಲೂ ಬಿಜೆಪಿ ವಿರುದ್ಧ ಕುಟುಕಿದ್ದಾರೆ.


Spread the love

LEAVE A REPLY

Please enter your comment!
Please enter your name here