ಮಲಯಾಳಂ ಖ್ಯಾತ ನಟ ಕಲಾಭವನ್ ನವಾಸ್ ಮೃತದೇಹ ಹೋಟೆಲ್‌ ರೂಮ್‌ ನಲ್ಲಿ ಪತ್ತೆ

0
Spread the love

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ ಕಲಾಭವನ್ ನವಾಸ್ ಮೃತದೇಹ ಪತ್ತೆಯಾಗಿದೆ. ಎರ್ನಾಕುಲಂನ ಚೊಟ್ಟನಿಕ್ಕರದಲ್ಲಿರುವ ಹೋಟೆಲ್ ಒಂದರಲ್ಲಿ ನಟನ ಮೃತ ದೇಹ ಪತ್ತೆಯಾಗಿದ್ದು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Advertisement

ನಟ ನವಾಸ್ ಅವರು ತಮ್ಮ ಮುಂದಿನ ‘ಪ್ರಕಂಬನಂʼ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಅಂತೆಯೇ ಶುಕ್ರವಾರ ಚಿತ್ರೀಕರಣ ಮುಗಿಸಿ ಹೋಟೆಲ್‌ ಗೆ ಬಂದಿದ್ದಾರೆ. ಶುಕ್ರವಾರ ಅವರು ಹೋಟೆಲ್‌ ಚೆಕ್‌ ಔಟ್ ಮಾಡಬೇಕಿತ್ತು. ಆದರೆ ಎಷ್ಟೇ ಹೊತ್ತು ಕಳೆದರು ಹೋಟೆಲ್‌ ರೂಂನಿಂದ ಹೊರ ಬಂದಿರಲಿಲ್ಲ.

ಸಾಕಷ್ಟು ಸಮಯ ಆದರು ಕಲಾಭವನ್‌ ನವಾಸ್‌ ರೂಮಿನಿಂದ ಹೊರ ಬಾರದ ಕಾರಣ ರೂಮ್‌ ಬಾಯ್‌ ಹೋಗಿ ನೋಡಿದ್ದಾರೆ. ಈ ವೇಳೆ ಪ್ರಜ್ಞೆತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಅದಾಗಲೇ ನವಾಸ್‌ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ನವಾಸ್ ಅವರ ಕೋಣೆಯಲ್ಲಿ ಅನುಮಾನಾಸ್ಪದವಾದ ಯಾವುದೇ ವಸ್ತು ಪತ್ತೆಯಾಗಿಲ್ಲ. ಅವರ ಮೃತದೇಹವನ್ನು ಚೊಟ್ಟನಿಕ್ಕರದ ಎಸ್‌ಡಿ ಟಾಟಾ ಆಸ್ಪತ್ರೆಯ ಶವಗಾರದಲ್ಲಿಡಲಾಗಿತ್ತು. ಇಂದು ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಆ ಬಳಿಕ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

1995ರಲ್ಲಿ ಚೈತನ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನವಾಸ್, ಮಟ್ಟುಪೆಟ್ಟಿ ಮಚ್ಚನ್, ಜೂನಿಯರ್ ಮಂದ್ರೇಕ್, ಅಮ್ಮ ಅಮ್ಮಾಯಿ ಅಮ್ಮ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.


Spread the love

LEAVE A REPLY

Please enter your comment!
Please enter your name here