ರಾಂಚಿ: ಜಾರ್ಖಂಡ್ʼನ ಮಾಜಿ ಸಿಎಂ, JMM ಸಂಸ್ಥಾಪಕ ಶಿಬು ಸೊರೆನ್ (81) ಅವರು ನಿಧನರಾಗಿದ್ದಾರೆ. ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಸೊರೇನ್ ಅವರನ್ನ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ಇತ್ತೀಚೆಗೆ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ತಂದೆಯ ನಿಧನದ ಮಾಹಿತಿಯನ್ನು ಪುತ್ರನೂ ಆಗಿರುವ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ʻಪ್ರೀತಿಯ ದಿಶೋಮ್ ಗುರೂಜಿ ನಮ್ಮನ್ನ ಅಗಲಿದ್ದಾರೆ. ನಾನಿಂದು ಎಲ್ಲವನ್ನೂ ಕಳೆದುಕೊಂಡೆʼ ಅಂತ ಭಾವುಕ ಸಂದೇಶವೊಂದನ್ನೂ ಹಂಚಿಕೊಂಡಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖಂಡರಾದ ಶಿಬು ಸೊರೇನ್ ಅವರು ಕಳೆದ 38 ವರ್ಷಗಳಿಂದ ಪಕ್ಷದ ಚುಕ್ಕಾಣಿ ಹಿಡಿದಿದ್ದರು. 4 ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಶಿಬು ಸೊರೇನ್ ತಮ್ಮದೇ ಛಾಪು ಮೂಡಿಸಿದ್ದಾರೆ. 8 ಬಾರಿ ಲೋಕಸಭೆಗೆ, ಎರಡು ಅವಧಿಗೆ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು.