ಸನಾ: ಬೋಟ್ ಮುಳುಗಡೆಯಾಗಿ 76 ಮಂದಿ ಸಾವು!

0
Spread the love

ಸನಾ:- ಯೆಮೆನ್ ಕರಾವಳಿಯಲ್ಲಿ ಬೋಟ್ ಮುಳುಗಡೆಯಾದ ಪರಿಣಾಮ 76 ಮಂದಿ ವಲಸಿಗರು ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿರುವ ಘಟನೆ ಜರುಗಿದೆ.

Advertisement

32 ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ 76 ಮಂದಿ ವಲಸಿಗರ ಮೃತದೇಹ ಪತ್ತೆಯಾಗಿದೆ ಎಂದು ಯೆಮೆನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 157 ಜನರು ಹಡಗಿನಲ್ಲಿದ್ದರು ಎಂದು ವರದಿಗಳು ತಿಳಿಸಿವೆ. ಕಡುಬಡತನದಿಂದ ಆಫ್ರಿಕಾದಿಂದ ನೂರಾರು ವಲಸಿಗರು ಗಲ್ಫ್ ಅರಬ್ ರಾಷ್ಟ್ರಕ್ಕೆ ತೆರಳುತ್ತಿದ್ದರು. ಯೆಮೆನ್‌ಗೆ ಅನಧಿಕೃತ ವಲಸಿಗರ ಹರಿವು ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಘಟನೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here