ವಾಣಿಜ್ಯ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿಗಳು ಮಹಾವಿದ್ಯಾಲಯದ ಉಪನ್ಯಾಸಕರೊಂದಿಗೆ, ನರಸಾಪೂರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸಂಜೀವಿನಿ ವಾಟರ್ ಸ್ಟೋರೇಜ್ ಉತ್ಪನ್ನ ಘಟಕಕ್ಕೆ ಭೇಟಿ ನೀಡಿ ಸಿಂಟೆಕ್ಸ್ಗಳು ತಯಾರಾಗುವ ವಿಧಾನವನ್ನು, ಕಚ್ಚಾ ಸಾಮಾಗ್ರಿಗಳ ವ್ಯವಸ್ಥಿತ ಪೂರೈಕೆ, ಖರೀದಿ, ಸಾಗಾಟ, ಸಂಗ್ರಹಣೆಯ ಬಗ್ಗೆ ತಳಿದುಕೊಂಡರು.

Advertisement

ವಾಣಿಜ್ಯ ವಿಭಾಗದ ಕೋ-ಆರ್ಡಿನೇಟರ್ ಪ್ರೊ. ಎಸ್.ಎಸ್. ವಜ್ರಬಂಡಿ ಮಾತನಾಡಿ, ವ್ಯವಹಾರ ಅಧ್ಯಯನವನ್ನು ಪಠ್ಯದಲ್ಲಿ ಅಭ್ಯಸಿಸುವುದಕ್ಕೂ ಪಠ್ಯೇತರವಾಗಿ ಅಭ್ಯಸಿಸುವುದಕ್ಕೂ ವ್ಯತ್ಯಾಸವಿದೆ. ಈ ಸುವರ್ಣಾವಕಾಶವನ್ನು ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟ ಸಂಜೀವಿನಿ ಸಿಂಟೆಕ್ಸ್ ಕಂಪನಿಯ ಮಾಲಕರಾದ ವಿನೋದ ಪಟೇಲರು ಅಭಿನಂದನಾರ್ಹರು ಎಂದರು.

ಮುಖ್ಯಸ್ಥರಾದ ವಿನೋದ ಪಟೇಲ ತಮ್ಮ ವ್ಯವಸ್ಥಾಪಕ ಸಿಬ್ಬಂದಿಯೊಂದಿಗೆ ಸಿಂಟೆಕ್ಸ್ ತಯಾರಿಕೆಯ ಹಂತವನ್ನು ವಿವರಿಸಿ, ಇಡೀ ಕರ್ನಾಟಕದಲ್ಲಿಯೇ ಪ್ರಪ್ರಥಮಬಾರಿಗೆ ಕಾಪರ್ ಆ್ಯಂಟಿ ಮೈಕ್ರೋಬಿಯಲ್ ವಾಟರ್ ಸ್ಟೋರೇಜ್ ಟ್ಯಾಂಕ್ ಉತ್ಪಾದಿಸುವ ಏಕೈಕ ಘಟಕ ನಮ್ಮದು ಎಂದರು.

ಸಂಜೀವಿನಿ ಉತ್ಪಾದನಾ ಘಟಕದ ಎಲ್ಲ ಪದಾಧಿಕಾರಿಗಳನ್ನು, ಸಿಬ್ಬಂದಿಯನ್ನು ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ಉಡುಪಿ ದೇಶಪಾಂಡೆ, ಪ್ರೊ. ರಾಹುಲ್ ಒಡೆಯರ್ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಸಂಗೀತಾ ಬೀಳಗಿ, ಪ್ರೊ. ಡಿ.ಬಿ. ಕುಲಕರ್ಣಿ ಪ್ರಸಂಶಿಸಿದರು.


Spread the love

LEAVE A REPLY

Please enter your comment!
Please enter your name here