ವಿಜಯಸಾಕ್ಷಿ ಸುದ್ದಿ, ಗದಗ: ಶಿವಮೊಗ್ಗದಲ್ಲಿ ನಡೆದ 3ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗದುಗಿನ ಅಮರೇಶ್ವರ ನಗರದ ರಾಯಲ್ ಯುಥ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ವಿದ್ಯಾರ್ಥಿಗಳಾದ ಸೈಫ ದೊಡ್ಡಮನಿ (ತೃತೀಯ), ವಿರಾಟ ಚವ್ಹಾಣ (ದ್ವಿತೀಯ), ರಿಯಾನ್‌ಮಲ್ಲಿಕ್ ಸಿಂಧನೂರ (ಪ್ರಥಮ), ರುಬಯ ಕೋಣಸಾಗರ (ಪ್ರಥಮ), ಸಂಪ್ರಿತ ಹೂಗಾರ (ಪ್ರಥಮ), ತನ್ವೀರ ಕದಡಿ (ದ್ವಿತೀಯ), ಪ್ರವೀಣ ಶಿರಿಯಣ್ಣಮ್ಮನವರ (ಪ್ರಥಮ), ಭರತ ದೊಡ್ಡಮನಿ (ಪ್ರಥಮ), ಹನಮಂತಗೌಡ ಪಾಟೀಲ (ಪ್ರಥಮ), ಸುಬ್ರಮಣ್ಯ ಕಬಸೂರ (ದ್ವಿತೀಯ), ರಿಯಾನ್ ಹಾನಗಲ್ಲ (ಪ್ರಥಮ), ಗಗನ ನಿಂಬನಾಯ್ಕರ (ಪ್ರಥಮ), ಮಹಮ್ಮದಹಾಜಿದ ಕಾಗದಗಾರ (ತೃತೀಯ), ರುಕ್ಕಯ್ಯ ಬೇಪಾರಿ (ಪ್ರಥಮ), ಭೂಮಿಕಾ ನಿಂಬನಾಯ್ಕರ (ಪ್ರಥಮ), ಪ್ರಣವಿ ಕೇರಿ (ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ರಾಯಲ್ ಯುಥ್ ಮಾರ್ಷಲ್ ಆರ್ಟ್ಸ್ ಮುಖ್ಯ ತರಬೇತುದಾರ ಮೆಹಬೂಬ ದೊಡ್ಡಮನಿ, ಟೀಮ್ ಮ್ಯಾನೇಜರ್ ಸೀಮಾನಾಜ್ ದೊಡ್ಡಮನಿ, ಪಾಲಕರು, ಅಮರೇಶ್ವರ ನಗರದ ಗುರು-ಹಿರಿಯರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.