ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಮ್ಮಿಕೊಂಡಿದ್ದ 97ನೇ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಗದುಗಿನ ವಿಜಯನಿಧಿ ಅಗ್ರೋ ಇಂಡಸ್ಟ್ರೀಸ್ ನ ಮಾಲೀಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆದ ಶರಣಬಸಪ್ಪ ಸಂಗಪ್ಪ ಗುಡಿಮನಿ ಅವರಿಗೆ ಪ್ರತಿಷ್ಠಿತ `ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.
ಹುಬ್ಬಳ್ಳಿ ಎಪಿಎಂಸಿ ಬಳಿಯ ಹು-ಧಾ ವಿವಿಧೋದ್ದೇಶ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) 97ನೇ ಸಂಸ್ಥಾಪಕರ ದಿನಾಚರಣೆಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾಧಕ ವಾಣಿಜ್ಯೋದ್ಯಮಿಗಳಾದ ಶರಣಬಸಪ್ಪ ಗುಡಿಮನಿ, ಜಯಂತ ಹುಂಬರವಾಡಿ, ಪ್ರಕಾಶ ಬಾಫಣಾ, ರವೀಂದ್ರಕುಮಾರ ಬೆಕನಾಳ, ಸಿದ್ಧಣ್ಣ ನಾಲ್ವಾಡ, ದೇವಕಿ ಯೋಗಾನಂದ ಅವರಿಗೆ ಜೆ.ಎಸ್.ಡಬ್ಲ್ಯೂ ಎನರ್ಜಿ ನಿರ್ದೆಶಕ ಪಾರ್ಥ ಜಿಂದಾಲ್ ಅವರು ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಿ ಸಾಧಕರ ಸಾಧನೆಯನ್ನು ಶ್ಲಾಘಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಪ್ರವೀಣ ಅಂಗಡಿ, ಸಂಸ್ಥಾಪನಾ ದಿನಾಚರಣಾ ಸಮಿತಿಯ ಚೇರಮನ್ ಪ್ರಕಾಶ ಲಿಂಬಯ್ಯಸ್ವಾಮಿಮಠ, ಶಂಕ್ರಣ್ಣ ಮುನವಳ್ಳಿ, ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ ಸೇರಿದಂತೆ ಗಣ್ಯಮಾನ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.